ಈ ಕನಸೇ ಹಾಗೆ

ಒಂದು ಬದುಕಿನ ಸುತ್ತ
ನೂರೈವತ್ತು
ಕನಸಿನ ಹುತ್ತ
ಸುರುಳಿ ಸುತ್ತಿ ಕೂತ ಹಾವು… ಶತಕಂಠಿ!
ಗಡಚಿಕ್ಕುವ ಫೂತ್ಕಾರ
ನಿದ್ದೆಗೆಡಿಸುತ್ತವೆ ಬುಸುಗುಟ್ಟುತ್ತ ದ್ರಾಬೆ ಥರಾ!

ಕಳೆದುಕೊಳ್ಳುತ್ತವೆ
ಗೆದ್ದಿಲುಗಳು ಅರಮನೆ
ಅಲೆಯುತ್ತವೆ
ಹೀಗೇ ಸುಮ್ಮನೆ!

***
“ಅಹೋ! ಆದಿಶೇಷ
ನಿನ್ನ ಹೆಡೆಯಡಿಯ ನೆರಳಿನದೇನು ಹೇಳಲಿ?
ಮೊನ್ನೆ ಅಲ್ಲಿ ಎದ್ದಿದ್ದ
ಅಣಬೆಗಳ ಸಂತತಿಗೆ
ಅದ್ವೈತದ ಅನುಭವವಾಯಿತಂತೆ?
ನಿಜವೇ?”
***
ಹಾವು ಹರಿದಾಡುತ್ತವೆ, ತಣ್ಣಗೆ
ದೇಹ ನವೆದಷ್ಟೂ
ಚರ್ಮ ಸುಲಿಯುತ್ತವೆ
ಸಿಪ್ಪೆ, ಸಿಪ್ಪೆಗಳ ರಾಶಿ!
ಪೊರೆ, ಪೊರೆಯಲ್ಲೂ ನಿಟ್ಟುಸಿರು.
ಅರೆ! ಅರೇ! ಅದೋ
ಶತಕಂಠಿಯ ಸೀಳು ನಾಲಿಗೆಯುಗುಳು
ಮುಖದ ತುಂಬಾ…
ತಾಗಿದಲ್ಲೆಲ್ಲ ವ್ರಣಗಳು,
ಕೀವು, ದುರ್ಗಂಧ…!
ಇದು ಕನ-ಸುಗಂಧ
***
“ಅರಬಿಯ ಎಲ್ಲಾ ನೆತ್ತರೂ ತೊಳೆಯಲಾರವು!”
ಲೇಡಿ ಮ್ಯಾಕ್ಬೆತ್ಳ ಕಳವಳದಂತೆ
ಮೂಗು ಹಿಡಿದರೆ – ಮೈ ಪುಗ್ಗಾ!
ಊದಿ ಓಡೆಯುತ್ತವೆ
ಊರೆಲ್ಲಾ ಸಿಡಿಯುತ್ತವೆ ಕೀವು
ಹನಿಗೊಂದು ಹೊಸ ವ್ರಣದ ಹುಟ್ಟು
ಹೊಕ್ಕಳ ಬಳ್ಳಿ ಇಲ್ಲದ ಜೀವ…
***
ಮತ್ತೆ ಕನಸು
ಮತ್ತೆ ಹೊಸ ಹುತ್ತ
ಮತ್ತೆ ಹೊಸ ನಡೆ
ಮತ್ತೆ…?

ಈ ಕನಸೇ ಹಾಗೆ!
ಇದು ‘ಮತ್ತೆ’ಗಳ ಸಂತೆ
ಬೆನ್ನಟ್ಟಿದವಗೆ
ಆದಿ ಇಲ್ಲದಂತ್ಯದ ಚಿಂತೆ!
ಜತೆಗಿರುವುದು ಹಾವು – ಅದರ ಕಾವು
ಮೈ ಬಾಗಿ ಕಣ್ಣು ಬಾಡಿದರೂ
ಮುಗಿಯದು… ಮಾಗದು
ಗೆದ್ದಲ ಹುಳುವಿನ ದೀಪೋತ್ಸಾಹ! ಆಹಾ!

– ಬಿ. ಸುರೇಶ ( ೫ ಸೆಪ್ಟಂಬರ್ ೨೦೦೮)

Advertisements

2 Responses to “ಈ ಕನಸೇ ಹಾಗೆ”


 1. 1 nuthan.hb December 11, 2009 at 9:37 am

  ಈ ಜೀವನವೇ ಹಾಗೇನೋ ಅನ್ನಿಸ್ತಾ ಇದೆ!
  ವಾಸ್ತವಕ್ಕೆ ಬಹು ಹತ್ತಿರವಾದ ಭ್ರಾಮಕತೆಯ ಭಾರವಿಲ್ಲದ ಕವನ..ಹತ್ತಿರವಾಯಿತು.

 2. 2 ಬಿ.ಸುರೇಶ December 14, 2009 at 6:16 am

  ವಂದನೆಗಳು.
  ನಾನು ಕವಿಯಲ್ಲ. ಆಗೀಗ ಗೀಚುತ್ತೇನೆ, ಅಷ್ಟೆ. ಅದು ನಿಮಗೆ ಆಪ್ತವಾಗಿದ್ದರೆ ಅದು ಆಕಸ್ಮಿಕ ಮಾತ್ರ.


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

 • 59,459 ಜನರು
Advertisements

%d bloggers like this: