ಮಾಡರನ್ ಆಟ

ದಿಕ್ಕುಗಾಣದ ಹಾದಿ
ನಡೆದಷ್ಟೂ ನವೆಯದ ನೆನಪು.
ಹೊರಳು ಹಾಸಿಗೆಯಲಿ
ಕೊರಳು ಹಿಡಿದಿದೆ ಕೈ
ಯಾರದೋ ಮುಷ್ಟಿ?
ಯಾರದೋ ಮಸ್ತಿ!

ಬರೆ!
ಬರಗೆಟ್ಟ ಬಟಾಬಯಲಂತಿರುವ
ಹಾಳೆಗಳ ನೆತ್ತಿಯ ಮೇಲೆ,
ರಂಗವಲ್ಲಿಯ ತುಂತುರು
ಬಣ್ಣವಿಲ್ಲದ ಶಾಯಿ ಬರೆದದ್ದೇ ಚಿತ್ತಾರ!
ಕೊರೆ!
ಒಣಗಿದ ಹೆಬ್ಬಂಡೆಯ ಮೇಲೆ
ಹೆಸರುಳಿಸುವ ಸಾಹಸ,
ಆಡಂಸ್ಮಿತ್ತನ ಅರ್ಥಶಾಸ್ತ್ರಕ್ಕೆ ಹೊಂದದ
ಆಧುನಿಕ ಸರ್ಕಸ್ಸು!

ಬರಿದೊಡಲ ಪಾತ್ರೆಯಲ್ಲಿ
ತೊಟ್ಟಿಕ್ಕುತ್ತಿದೆ ನೆತ್ತರು
ಜೀವಜಾಲದ ಸಾಸಿರ ತಂತು
ಮಿದಿಮಿದಿಯುತ್ತಿದೆ…
ಉತ್ತುಂಗಕ್ಕೇರುವ ತವಕ
ಹಿಲೇರಿಗೆ ಬೇಕಲ್ಲ, ಥೇನಸಿಂಗನ ಬೆನ್ನು
ಬಾವುಟ ಹಾರಿಸುವ ಬಯಕೆಗೆ
ಹೊರುವಾಳುಗಳ ಹುಡುಕಾಟ

ಇದು ಜೈತ್ರ ಯಾತ್ರೆ
ಗುರಿ ಇರದ ದಿಕ್ಕಿಗೆ
ಅಲೆಗ್ಸಾಂಡರನಂದದ ಪಯಣ!
ಅಶ್ವವಿಲ್ಲದ ಅಶ್ವಮೇಧ
ಹಿಡಿದು ನಿಲ್ಲಿಸುವ
ಲವಕುಶರಿಗೆ
ಕಾಯುವುದಷ್ಟೇ ಕೆಲಸ!
ಹಿಡಿದರೆ ಯುದ್ಧ
ಹಿಡಿಯದವರಿಲ್ಲದಿರೆ ಬುದ್ಧ!

– ಬಿ.ಸುರೇಶ ( ೧೯ ಮಾರ್ಚ್ ೨೦೦೭ ಯುಗಾದಿಯಂದು ಬರೆದದ್ದು)

0 Responses to “ಮಾಡರನ್ ಆಟ”



  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s




ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 38,193 ಜನರು

%d bloggers like this: