ಅತ್ತಿಂದಿತ್ತ ಇತ್ತಿಂದತ್ತ

(ಸಂಗೀತ ನಿರ್ದೇಶಕ ಸಾಗರ್ ಅವರ ಕೋರಿಕೆಗೆ ಬರೆದ ಸಾಲುಗಳು)

|| ಅತ್ತಿಂದಿತ್ತ ಇತ್ತಿಂದತ್ತ
ಹಾರುತಲಿದೆಯೋ ಹಕ್ಕಿ
ಬಾನಿನ ಹೊಲವನು ಒಕ್ಕಿ||

ಚುಕ್ಕಿಯ ಹುಡುಕಿತೋ ಕಣ್ಣು
ಚಂದ್ರನ ತೋರಿತೋ ಭಾನು
ರೆಕ್ಕೆಯ ಬಯಸಿತೋ ಕನಸು
ಗಕ್ಕನೆ ನಿಲಿಸಿತೋ ಮನಸು

|| ಅತ್ತಿಂದಿತ್ತ ಇತ್ತಿಂದತ್ತ
ತುಯ್ಯುತಲಿದೆಯೋ ಹಕ್ಕಿ
ದಾರಿಯನರಿಯದೆ ಬಿಕ್ಕಿ||

ಕೊಳಲನು ಅರಸಿತೋ ಭಾವ
ಬಿಳಲನು ನೀಡಿತೋ ಜೀವ
ತಂಗಾಳಿಯ ಬೇಡಿತೋ ಮೋಹ
ಒಣಬೇಸಿಗೆ ಸುಡುತಿದೆ ದೇಹ

ಮೆಚ್ಚಿದ್ದುಡಲೋ ಇತ್ತದ್ದುಣಲೋ
ತಿಳಿಯದೆ ನರಳಿದೆ ಜೀವ!

|| ಅತ್ತಿಂದಿತ್ತ ಇತ್ತಿಂದತ್ತ
ತೇಲುತಲಿದೆಯೋ ಹಕ್ಕಿ
ತೇರಿನ ಹಾದಿಯ ಹುಡುಕಿ||

ಅದುವೇ ನಿಜವೋ
ಇದುವೇ ದಿಟವೋ?
ಅವನೇ ಸರಿಯೋ –
ಇವನೇ ಹರಿಯೋ?
ತಿಳಿಯದೆ ಸಾಗಿದೆ ಪಥವು
ತಿಳಿಯದು ಹಾಡಿನ ಲಯವು

|| ಅತ್ತಿಂದಿತ್ತ ಇತ್ತಿಂದತ್ತ
ಬಾನಲಿ ತೇಲಿದೆ ಚುಕ್ಕಿ
ಭಾವದ ಬರದಲಿ ಸಿಲುಕಿ||

ಕನ್ನಡಿ ಹೇಳಿದ ಮಾತೇ ಬೇರೆ!
ಕಣ್ಣದು ಕಂಡ ಸತ್ಯವೇ ಬೇರೆ!
ಒಂದನು ಹಿಡಿದರೆ ಉಳಿಯವೆನೋ –
ಮತ್ – ಒಂದನು ಒಲಿದರೆ ಬದುಕುವೆನೋ

ಚುಕ್ಕಿಯನಿಟ್ಟ ಪುಟಗಳ ತುಂಬಾ
ಚಿತ್ರವ ಬಿಡಿಸಿದ ಗೆರೆಯೇ ಇಲ್ಲ…!
ಬಣ್ಣವ ತುಂಬಿದ ಗೋಡೆಯಲೊಂದು
ಬಾಗಿಲನಿಡಲು ಮರೆತಿಹರಲ್ಲ…!

|| ಅತ್ತಿಂದಿತ್ತ ಇತ್ತಿಂದತ್ತ
ಕಾಣದೆ ಹಾರಿದೆ ಹಕ್ಕಿ
ಇಲ್ಲದ ತೀರವ ಹುಡುಕಿ…||

– 000 –

Advertisements

1 Response to “ಅತ್ತಿಂದಿತ್ತ ಇತ್ತಿಂದತ್ತ”


  1. 1 Vishwas May 5, 2013 at 6:32 pm

    Beautiful sir. loved every line 🙂


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: