ಮತ್ತೊಂದು ಪದ್ಯದ ಪ್ರಯತ್ನ

(ಸಂಗೀತ ನಿರ್ದೇಶಕ ಸಾಗರ್ ಅವರಿಗಾಗಿ)

 

ಆ ಕಡೆ ಮಲ್ಲಿಗೆ ಈ ಕಡೆ ಸಂಪಿಗೆ – ಯಾರನು ಮುಡಿಯಲಿ ಹೇಳಣ್ಣಾ?

ಈ ಕಡೆ ಹಗಲು ಆ ಕಡೆ ಇರುಳು – ಆರಿಸೋ ಸಂಕಟ ನೀಗಣ್ಣಾ!

ನಡೆಯುವ ಹಾದಿಯ ನಡುವೆಯೆ ಬಂದಿದೆ ಕವಲಿನ ದಾರಿಯು ನೋಡಣ್ಣ!

ಎಡವೋ ಬಲವೋ ಒಳಗೋ ಹೊರಗೋ ತಿಳಿಯದ ತೊಳಲನು ಬಿಡಿಸಣ್ಣ!

1

ನಿನ್ನೆಯವರೆಗೆ ಜೊತೆ ಇದ್ದವರು ಕೈ ಹಿಡಿದೆನ್ನ ನಡೆಸಿದರು…

ನಡಿಗೆಯ ಕಲಿಯುವ ಕಾಲದಲಿ ಬಿದ್ದಾಗೆಲ್ಲಾ ಎತ್ತಿದರು….

ಹಾದಿಯ ತಿಳಿಯದ ಕಾಲದಲಿ ದಿಕ್ಕನು ತಿಳಿಸಿ ಕಳಿಸಿದರು…

ಹದಿಯನು ಮುಟ್ಟಿದ ಈ ಕ್ಷಣದಲ್ಲಿ ಇದ್ದವರಿಲ್ಲ ಜೊತೆಯಲ್ಲಿ…

ಒಂಟಿಯು ನಾನು ಈಗಿಲ್ಲಿ… ದಾರಿಯ ಒಡಪನು ಬಿಡಿಸಣ್ಣ…

|| ಎಡವೋ ಬಲವೋ/ ಒಳಗೋ ಹೊರಗೋ/ ತಿಳಿಯದ ತೊಳಲನು ಬಿಡಿಸಣ್ಣ||

2

ಆ ಕಡೆ ಉಪ್ಪು, ಈ ಕಡೆ ಬೆಲ್ಲ – ಯಾರನು ಧರಿಸಲಿ ಹೇಳೋ ಗೆಳೆಯಾ!

ಆ ಕಡೆ ಮುಳ್ಳು, ಈ ಕಡೆ ಹೂವು – ಯಾರನು ಹಿಡಿಯಲಿ ಹೇಳೋ ಹಳೆಯಾ!

ದೀಪದ ದಾರಿಯ ಕಹಿ ಎಂತೋ? ಕತ್ತಲ ಹಾದಿಯ ಸಿಹಿ ಎಂತೋ?

ಉತ್ತರವಿಲ್ಲದೆ ಉಳಿದಿಹ ಜೀವಕೆ ಹೊಲಬಿನ ಹಿತವನು ನುಡಿಯಣ್ಣಾ

|| ಎಡವೋ ಬಲವೋ/ ಒಳಗೋ ಹೊರಗೋ/ ತಿಳಿಯದ ತೊಳಲನು ಬಿಡಿಸಣ್ಣ||

– ಬಿ.ಸುರೇಶ

 

 

 

Advertisements

0 Responses to “ಮತ್ತೊಂದು ಪದ್ಯದ ಪ್ರಯತ್ನ”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: