ಮಾತಾಡು

Translitrration of a poem by Faiz Ahmed Faiz “Speak” by B.Suresha (translated on 16th Feb 2014 at 1pm)

ಮಾತಾಡು… ಮಾತಾಡು…
(ಮೂಲ: ಫೈಜ್ ಅಹ್ಮದ್ ಫೈಜ್ ಭಾವಾನುವಾದ: ಬಿ.ಸುರೇಶ)

ಮಾತಾಡು, ನಿನ್ನ ಬಾಯಿಗೆ ಬಂಧನವಾಗಿಲ್ಲ.
ಮಾತಾಡು, ನಿನ್ನ ನಾಲಿಗೆಯನ್ನು ಯಾರೂ ಹರಿದಿಲ್ಲ.
ಮಾತಾಡು, ನಿನ್ನ ಚರ್ಬಿಯನ್ನಾರೂ ತೆಗೆದಿಲ್ಲ.
ಮಾತಾಡು, ನಿನ್ನ ಜೀವವಿನ್ನೂ ಆರಿಲ್ಲ.

ನೆನಪಿರಲಿ, ಕಮ್ಮಾರನ ಅಂಗಡಿ ಇದು.
ಕೆಂಡವಿನ್ನೂ ಉರಿಯುತ್ತಿದೆ. ಕಬ್ಬಿಣವೂ ಕೆಂಪಾಗಿದೆ.
ಬೀಗಬಿದ್ದ ಸಾವಿರಾರು ಬಾಯಿಗಳನೆಲ್ಲ ಬಿಚ್ಚಬೇಕಿದೆ.
ಕಟ್ಟಿದ ಸರಪಳಿಗಳಿಂದಲೇ ಹೊಸ ಬದುಕು ಕಟ್ಟಬೇಕಿದೆ.

ಮಾತಾಡು, ಈ ಸಣ್ಣ ನೋವಿನ ಕಾಲವು ಮುಗಿಯಲಿದೆ.
ಸಾವು ಈ ದೇಹವೆಂಬ ನಾಲಿಗೆಯನ್ನು ಆವರಿಸಲಿದೆ.
ಮಾತಾಡು, ಸತ್ಯಕ್ಕಿನ್ನೂ ಸಾವು ಬಂದಿಲ್ಲವೆಂದು ಸಾರಿಬಿಡು.
ಮಾತಾಡು, ಬಚ್ಚಿಟ್ಟ ನೋವುಗಳನ್ನೆಲ್ಲ ಬಿಚ್ಚಿಟ್ಟುಬಿಡು…
ಮಾತಾಡು, ಮಾತಾಡುತ್ತಾ ಒಡೆದ ಮನಸುಗಳನೆಲ್ಲಾ ಕೂಡಿಸಿಬಿಡು.
* * *

Advertisements

0 Responses to “ಮಾತಾಡು”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: