ಹೋಗದಿರು ದೂರ

ಟಿಪ್ಪಣಿ: ಟೆಲಿವಿಷನ್ ಧಾರಾವಾಹಿಗಳ ಬರಹ ಎಂಬುದು ನಿರಂತರ ಶ್ರಮದ ಕೆಲಸ. ಅಂತಹ ಶ್ರಮದಿಂದ ಆಗುವ ಆಯಾಸ ಕಳೆಯಲು ಮನಸ್ಸನ್ನು ಹುರುಪುಗೊಳಿಸಲು ನಾನು ಮತ್ತೆ ಮತ್ತೆ ಇಂತಹ ಅಪರೂಪದ ಕವಿಗಳ ಕಡೆಗೆ ಹೋಗುತ್ತೇನೆ. ಒಮ್ಮೊಮ್ಮೆ ಭಾವಾನುವಾದಕ್ಕೂ ಪ್ರಯತ್ನಿಸುತ್ತೇನೆ. ಅಂತಹ ಒಂದು ಪ್ರಯತ್ನದ ಫಲ ಇದು.

ಹೋಗದಿರು ದೂರ

ಮೂಲ: ಪ್ಯಾಬ್ಲೋ ನೆರೂಡಾ

ಭಾವಾನುವಾದ : ಬಿ.ಸುರೇಶ

ಹೋಗದಿರು ದೂರ, ಒಂದು ದಿನಕ್ಕಾದರೂ ಸರಿ, ಏಕೆಂದರೆ…
ಏಕೆಂದರೆ, ಪದಗಳಿಲ್ಲ ಬಳಿಯಲ್ಲಿ ವಿವರಿಸಲು; ದಿನವೆಂಬುದು ದೀರ್ಘ – ಸುದೀರ್ಘ
ಕಾಯ ಕಾಯುವುದು ಖಾಲಿ ನಿಲ್ದಾಣದಂತೆ
ರೈಲುಗಳು ಇನ್ನೆಲ್ಲೋ ಮಲಗಿರುವಂತೆ…

ಬಿಟ್ಟೋಡದಿರು, ಕ್ಷಣಕ್ಕಾದರೂ ಸರಿ, ಏಕೆಂದರೆ…
ಏಕೆಂದರೆ, ಕಾತರದ ಹನಿಗಳು ಕೂಡಿ ಹರಿವುದು ನಿರಂತರ
ಮನೆ ಅರಸುವ ಹೊಗೆಯದು ಸುಳಿ ಸುಳಿದು
ನೆಲೆಸುವುದು ಒಳಗೆ ಹೃದಯ ಕಿವುಚುವ ಹಾಗೆ

ಓಹ್! ಸಮುದ್ರತೀರದಲಿ ನೆರಳು ಮುಳಗದಿರಲಿ
ಕಣ್ರೆಪ್ಪೆಯದು ಖಾಲಿ ದಿಗಂತ ನೋಡಿ ಮಿಟುಕದಿರಲಿ
ಬಿಟ್ಟಿರದಿರು ಕ್ಷಣ ಕೂಡ ಓ! ಪ್ರೇಮವೇ…

ಏಕೆಂದರೆ
ಏಕೆಂದರೆ…
ನೀನಗಲಿದ ಕ್ಷಣದಲಿ
ಅರಸುವೆ ಭೂಮಂಡಲವೆಲ್ಲಾ
ಪ್ರಶ್ನೆಗಳ ಸಂತೆಯಲಿ
ಬರುವೆಯೋ? ಬಾರದಿರುವೆಯೋ?
ಒಲವಿಗೆ ಸಾವೊಂದನೆ ಉಳಿಸುವೆಯೋ?
(೨೬ ಫೆಬ್ರವರಿ ೨೦೧೭ ಅಪರಾಹ್ನ: ೧೨.೩೦)

ಮೂಲ ಪದ್ಯದ ಪಾಠ:
Don’t go far off, not even for a day, because …
because … I don’t know how to say it: a day is long
and I will be waiting for you, as in an empty station
when the trains are parked off somewhere else, asleep.

Don’t leave me, even for an hour, because
then the little drops of anguish will all run together,
the smoke that roams looking for a home will drift
into me, choking my lost heart.

Oh, may your silhouette never dissolve on the beach;
may your eyelids never flutter into the empty distance.
Don’t leave me for a second, my dearest,

because in that moment you’ll have gone so far
I’ll wander mazily over all the earth, asking,
Will you come back? Will you leave me here, dying?

by Pablo NerudaNeruda

Advertisements

0 Responses to “ಹೋಗದಿರು ದೂರ”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 60,851 ಜನರು
Advertisements

%d bloggers like this: