Archive for the 'ಇಂದಿನ ಚಿಂತೆ!' Category

ಅವರು ಕೇಳುತ್ತಾರೆ

(ಮೂಲ ಪದ್ಯ: ಓಟ್ಟೋ ರೆನೆ ಕ್ಯಾಸ್ಟಿಲ್ಲೋ –ಗ್ವಾಟೆಮಾಲಾದ ಕವಿ, ಹೋರಾಟಗಾರ)

(ಭಾವಾನುವಾದ: ಬಿ.ಸುರೇಶ) Continue reading ‘ಅವರು ಕೇಳುತ್ತಾರೆ’

Advertisements

ಮಹಿಳೆಯ ಕಣ್ಣಲ್ಲಿ ಪುರುಷ ಲೋಕ

(ಭಾರತೀಹೆಗಡೆ ಅವರ ಲೇಖನಗಳ ಸಂಕಲನಕ್ಕೆ ಮುನ್ನುಡಿ)

ಭಾರತಿ ಹೆಗಡೆ ಅವರು ತಮ್ಮ ಅಂಕಣ ಬರಹಗಳ ಮೂಲಕ ಬಹುಕಾಲದಿಂದ ಪರಿಚಿತರು. ಆದರೆ ಮುಖತಃ ನಾನವರನ್ನು ಭೇಟಿಯಾಗಿರುವುದು ಒಂದೆರಡು ಬಾರಿ ಮಾತ್ರ. ಹೀಗಿದ್ದರೂ ಅವರು ತಮ್ಮ ಲೇಖನಗಳ ಸಂಗ್ರಹಕ್ಕೆ ಮುನ್ನುಡಿ ಬರೆಯಬೇಕೆಂದು ಕೇಳಿದಾಗ ನನಗೆ ಆಶ್ಚರ್ಯವಾಗಿತ್ತು. ನಾನ್ಯಾವ ದೊಡ್ಡ ವಿಮರ್ಶಕ ಎಂದು ಮುನ್ನುಡಿ ಕೇಳುತ್ತಾ ಇದ್ದಾರೆ ಎಂದು ಹಿಂಜರಿದಿದ್ದೆ. ಭಾರತಿ ಅವರು ಬಿಡದೆ ಬೆನ್ನು ಬಿದ್ದರು. ಅವರು ಕಳಿಸಿದ ಲೇಖನ ಮಾಲೆಯಲ್ಲಿದ್ದ ಮುವ್ವತ್ತೈದು ಲೇಖನಗಳನ್ನು ಓದದೆ ತಿಂಗಳ ಕಾಲ ಸುಮ್ಮನಿದ್ದವನು ಒಂದೊಮ್ಮೆ ಓದಿ ಬಿಡುವ ಎಂದು ಆರಂಭಿಸಿದೆ. ಅಚ್ಚರಿ ಎಂಬಂತೆ ಎಲ್ಲಾ ಲೇಖನಗಳೂ ಓದಿಸಿಕೊಂಡು ಹೋದವು. ಒಂದೇ ರಾತ್ರಿಯಲ್ಲಿ ಅಷ್ಟೂ ಲೇಖನಗಳನ್ನು ಓದಿ ಮುಗಿಸಿದೆ. ನಂತರ ಮುನ್ನುಡಿಯಂತಹುದನ್ನು ಬರೆಯಲೆಂದು ಕುಳಿತೆ. ಮೊದಲಿಗೇ ಹೇಳಿಬಿಡುತ್ತೇನೆ, ಇದು ಮುನ್ನುಡಿಯಲ್ಲ, ಪ್ರಾಯಶಃ ಒಂದು ಪುಸ್ತಕಕ್ಕೆ ಪ್ರವೇಶ ದೊರಕಿಸಿಕೊಡುವ ಲೇಖನ ಎನ್ನಬಹುದಷ್ಟೇ. Continue reading ‘ಮಹಿಳೆಯ ಕಣ್ಣಲ್ಲಿ ಪುರುಷ ಲೋಕ’

ಆರೋಗ್ಯಕರ ಸಮಾಜ ಸೃಷ್ಟಿಯಲ್ಲಿ ರಂಗ ಸಂಘಟನೆಯ ಪಾತ್ರ

(ಸಿಂಧುವಳ್ಳಿ ಅನಂತಮೂರ್ತಿ ನೆನಪಿಗಾಗಿ ಹೊರತರುತ್ತಾ ಇರುವ ಸಂಸ್ಮರಣ ಗ್ರಂಥಕ್ಕೆ ಸಭೆಯೊಂದರಲ್ಲಿ ಆಡಿದ ಮಾತನ್ನು ಲೇಖನವಾಗಿಸಲಾಗಿದೆ.)
ರಂಗಭೂಮಿ ಎನ್ನುವುದು ಸಂಘಟಿತ ಸಮುದಾಯದ ಪ್ರಯತ್ನ. ನಾಟಕ ಮಾಡುವ ಜನರಂತೆಯೇ ನಾಟಕ ನೋಡುವವರನ್ನು ಸಹ ಸಂಘಟಿಸಿ ಒಂದೆಡೆ ಸೇರಿಸಿದ ನಂತರವೇ ನಾಟಕವನ್ನು ಪ್ರದರ್ಶಿಸಲು ಸಾಧ್ಯ. ಇಲ್ಲಿ ಇಬ್ಬಗೆಯ ಸಂಕಟ ಮತ್ತು ಸವಾಲುಗಳಿವೆ. ಮೊದಲನೆಯದು; ನಾಟಕ ಮಾಡುವ ತಂಡವನ್ನು ಸಂಘಟಿಸುವುದು, ಎರಡನೆಯದು; ಆ ನಾಟಕದ ಪ್ರದರ್ಶನಕ್ಕೆ ನೋಡುಗರನ್ನು ಸಂಘಟಿಸುವುದು. ಇವೆರಡೂ ಕೆಲಸಗಳೂ ಒಂದೇ ಬಗೆಯದಲ್ಲ ಹಾಗೂ ಸುಲಭಕ್ಕೆ ಗೆಲುವು ಸಾಧಿಸಬಹುದಾದ್ದೂ ಅಲ್ಲ. ಅದರಲ್ಲಿಯೂ ಸಣ್ಣ ಸಣ್ಣ ಊರುಗಳಲ್ಲಿ, ಬಡಾವಣೆಗಳಲ್ಲಿ ಇಂತಹ ಜನ ಸೇರಿಸುವ ಕೆಲಸ ಮಾಡುವವರು ಎದುರಿಸುವ ಸಮಸ್ಯೆಗಳನ್ನು ಅರಿತಾಗ ಈ ಸಂಘಟನೆ ಎಂಬುದು ಎಷ್ಟು ತ್ರಾಸಿನ ಕೆಲಸ ಎಂಬುದು ಅರಿವಾಗುತ್ತದೆ. ಈ ಸಂಘಟನೆಯ ಕೆಲಸದ ಆಳಗಳೇನು? ಈ ಕೆಲಸ ಮಾಡುವ ಕ್ರಮ ಏನು? ಎಂದು ಕಲಿಸುವ ಶಾಲೆಗಳು ಸಹ ನಮ್ಮಲ್ಲಿ ಇಲ್ಲ. ಇರುವ ರಂಗಶಾಲೆಗಳಲ್ಲಿಯು ಅಭಿನಯ, ನಿರ್ದೇಶನ ಇನ್ನಿತರ ತಾಂತ್ರಿಕ ಕೌಶಲಗಳನ್ನು ಹೇಳಿಕೊಡುತ್ತಾರೆ. ಆದರೆ ಸಂಘಟನೆ ಮಾಡುವುದು ಹೇಗೆ ಎಂಬ ಪಾಠ ಎಲ್ಲಿಯೂ ಇದ್ದಂತಿಲ್ಲ. ಹಾಗಾಗಿಯೇ ಯಾವ ತರಬೇತಿಯೂ ಇಲ್ಲದೆ ನಿರಂತರವಾಗಿ ಸಂಘಟನೆಯನ್ನು ಮಾಡುತ್ತಾ, ರಂಗಚಳುವಳಿಯನ್ನು ಜೀವಂತವಾಗಿ ಇರಿಸುವ ಮತ್ತು ಹವ್ಯಾಸೀ ಚಟುವಟಿಕೆಯಾಗಿ ಆರಂಭವಾದುದನ್ನು ಸಹ ವೃತ್ತಿಪರವಾಗಿ ಸಂಘಟಿಸುವ ವ್ಯಕ್ತಿಗಳ ಬಗ್ಗೆ ನನಗೆ ಅಪಾರ ಗೌರವ. Continue reading ‘ಆರೋಗ್ಯಕರ ಸಮಾಜ ಸೃಷ್ಟಿಯಲ್ಲಿ ರಂಗ ಸಂಘಟನೆಯ ಪಾತ್ರ’

“ಬಹುತ್ವದ ನೆಲೆಗಳು”

(ಕರ್ನಾಟಕ ಸಾಹಿತ್ಯ ಅಕಾಡೆಮಿಯು 7 ಡಿಸೆಂಬರ್ 2017ರಂದು ಯೋಜಿಸಿದ್ದ ವಿಚಾರ ಸಂಕಿರಣಕ್ಕಾಗಿ ಸಿದ್ಧಪಡಿಸಿದ ಟಿಪ್ಪಣಿಯನ್ನಾಧರಿಸಿ ಸಿದ್ಧವಾದ ಲೇಖನ)

ಬಹುತ್ವ ಎನ್ನುವುದು ಬಹುಕಾಲದಿಂದ ಈ ನಾಡಿನಲ್ಲಿ, ಈ ಜಂಬೂದ್ವೀಪೇ ಭರತ ಖಂಡೇ ಎಂದು ಗುರುತಿಸಲಾದ ನೆಲದಲ್ಲಿ ಚರ್ಚೆಯಾಗಿರುವ, ಚರ್ಚೆ ಆಗುತ್ತಿರುವ ಮತ್ತು ಚರ್ಚೆಯಾಗುವ ವಿಷಯ. ಸಮಕಾಲೀನ ಕಾಲಘಟ್ಟದಲ್ಲಂತೂ ಮತ್ತೆ ಮತ್ತೆ ಚರ್ಚೆಯಾಗಬೇಕಾದ, ಸಂವಾದಗಳ ಮೂಲಕ ಘಾಸಿಗೊಂಡ ಮನಸ್ಸುಗಳನ್ನು ತಣಿಸಬೇಕಾದ, ಆಗಿರುವ ಗಾಯಗಳಿಗೆ ಔಷಧ ಆಗಬೇಕಾದ ವಿಷಯ. ಹಾಗಾಗಿ ಈ ಸಂವಾದ ನಡೆಸುತ್ತಿರುವುದಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯನ್ನು ಅಭಿನಂದಿಸಿ ನನ್ನ ಟಿಪ್ಪಣಿಗಳನ್ನು ಮಂಡಿಸುತ್ತೇನೆ. Continue reading ‘“ಬಹುತ್ವದ ನೆಲೆಗಳು”’

ಆಧುನಿಕ ತಲ್ಲಣಗಳ ಸ್ಪಷ್ಟ ಚಿತ್ರಣ

(ರಾಜಾರಾಂ ತಲ್ಲೂರು ಅವರ ಲೇಖನಗಳ ಸಂಗ್ರಹಕ್ಕಾಗಿ ಬರೆದ ಕೆಲವು ಸಾಲುಗಳು)

ಇಂದು ನಮ್ಮೆದುರಿಗೆ ನಿಮಿಷಕ್ಕೊಂದು ಪ್ರವಚನ, ಗಳಿಗೆಗೊಂದು ನಿರ್ವಚನ ಹುಟ್ಟುತ್ತಿದೆ. ಆಧುನಿಕ ಮನುಷ್ಯ ಮಾಹಿತಿ ಪ್ರವಾಹದಲ್ಲಿ ಅದರ ಸತ್ಯಾಸತ್ಯತೆಯನ್ನು ಅರಿಯುವ ಮೊದಲೇ ಮುಳುಗಿ ಹೋಗಿದ್ದಾನೆ. ಇದರಿಂದಾಗಿ ಇಡೀ ಸಮಾಜವೇ ಬಲ, ಎಡ, ನಡ ಎಂಬ ಅನೇಕ ಧೃವೀಕರಣಗಳಲ್ಲಿ ಸಿಕ್ಕಿಕೊಂಡಿದೆ ಮತ್ತು ಗೊಂದಲದ ಗೂಡಾಗಿದೆ. ಇಂತಹ ಕಾಲಘಟ್ಟದಲ್ಲಿ ಮಾಧ್ಯಮಗಳು ಸಂಯಮಿಗಳಾಗಿ ತಿಳುವಳಿಯನ್ನು ನೀಡುವುದಕ್ಕಿಂತ ಹೆಚ್ಚಾಗಿ ತಲ್ಲಣಗಳನ್ನು, ಕಾತರಗಳನ್ನು ಪ್ರಧಾನವಾಗಿ ಉಣಬಡಿಸುತ್ತಿರುವ ಸಂಕಟವೂ ಸೇರಿಕೊಂಡು ಒಟ್ಟು ಸಮಾಜವು ವಾದ-ವಿವಾದಗಳ, ದ್ವೇಷ-ಕದನಗಳ ತಾಣವಾಗಿದೆ. ನಿನ್ನೆಯ ವರೆಗೂ ಸ್ನೇಹಿತರಾಗಿದ್ದವರು ಇಂದು ಬೇರೆ ಬೇರೆ ಬಾವುಟಗಳ ಅಡಿಯಾಗಿ ಒಬ್ಬರ ವಿರುದ್ಧ ಮತ್ತೊಬ್ಬರು ಚೀರುತ್ತಾ ಇದ್ದಾರೆ. ಈ ಹೊತ್ತಿನಲ್ಲಿ ನಮ್ಮ ಸಾಮಾನ್ಯ ಜನಗಳಿಗೆ ಒಂದು ವಾದದ, ಒಂದು ವಿವಾದದ ಎಲ್ಲಾ ಮಗ್ಗುಲುಗಳ ಚರ್ಚೆಯನ್ನು ಅದರಾಳಕ್ಕಿಳಿದು ತಿಳಿಸುವ ಕೆಲಸವನ್ನು ಕೆಲವು ಪತ್ರಕರ್ತರು ಮಾತ್ರ ಮಾಡುತ್ತಾ ಇದ್ದಾರೆ. ಅಂತಹವರ ಸಂಖ್ಯೆ ಬೆರಳೆಣಿಕೆಯದು ಅಷ್ಟೇ. ಆ ಪಟ್ಟಿಯಲ್ಲಿ ಪ್ರಮುಖ ಹೆಸರು ರಾಜಾರಾಂ ತಲ್ಲೂರು ಅವರದ್ದು. Continue reading ‘ಆಧುನಿಕ ತಲ್ಲಣಗಳ ಸ್ಪಷ್ಟ ಚಿತ್ರಣ’

ಚಿನ್ನದಂತವನು…

ಅವನು ಖಂಡಿತ ಗೆಳೆಯ ಅಲ್ಲ… ಗುರು. ನನ್ನಂತಹ ಅನೇಕರನ್ನು ಕೈ ಹಿಡಿದು ನಡೆಸಿದ, ದಾರಿ ತೋರಿದ ಮಾಂತ್ರಿಕ. ತನ್ನೆದುರಿಗೆ ಸಿಕ್ಕ ಎಲ್ಲರಿಗೂ ಪ್ರೀತಿಯನ್ನೇ ಹಂಚುವ ಹೃದಯವಂತ. ಹಾಗಾಗಿಯೇ ಅವನು ನಮ್ಮೆಲ್ಲರ ಪಾಲಿನ ಚಿನ್ನ.
ಇಷ್ಟು ಹೇಳಿದರೆ ಕಾಸರಗೋಡು ಚಿನ್ನನ ಕುರಿತು ಎಲ್ಲ ಮಾತು ಆಡಿ ಮುಗಿಸಿದಂತೆ. ಆದರೆ ನಮಗೆ ಇಂತಹ ಗುರು ಸಿಕ್ಕಿದ್ದು, ಅವನಿಂದ ಕಲಿತದ್ದು ಹೇಗೆಂದು ಹೇಳಬೇಕಲ್ಲ. ಆ ಕೆಲಸವನ್ನು ಕ್ಲುಪ್ತವಾಗಿ ಮಾಡಲು ಪ್ರಯತ್ನಿಸುತ್ತೇನೆ. Continue reading ‘ಚಿನ್ನದಂತವನು…’

*”ಕಿತ್ತಲೆಯ ಕಳವಳ”*
ಆಟಕ್ಕೆ ಸಿದ್ಧವಿದ್ದೆವು.
ಕೈಯಲ್ಲಿ ಅಮ್ಮನಿತ್ತ ಕಿತ್ತಳೆ ಇತ್ತು.
ಅಡಗಿ ತಿನ್ನಲು ಹಣ್ಣು
ತಾಣ ಹುಡುಕುತ್ತಿತ್ತು ಎಳೆಗಣ್ಣು.

ಆಗವರು ಬಂದರು…
ಠಕ್ ಠಿಕ್ ಠಕ್ ಠಿಕ್
ಬೂಟುಗಾಲಿನ ನಾದದವರು.
ಕಲ್ಲಂಗಡಿಯ ಸಮವಸ್ತ್ರ ತೊಟ್ಟವರು.
ಸಾಲು ಸಾಲು ದೈತ್ಯರು.
ಕೈಯಲ್ಲಿ ಫರಂಗಿ ಗನ್ನು
ಸಿಟ್ಟು ತುಂಬಿದ ಕೆಂಗಣ್ಣು
ಸಿಡಿದಿತ್ತು ಶತಮಾನಗಳ ಹಳೆಯ ಹುಣ್ಣು

ನೋಡುತ್ತಿದ್ದ ಬೆರಗುಗಣ್ಣು
ಬಿದ್ದಿತ್ತು ಬುಡಕಡಿದ ಬಾಳೆಯ ಹಾಗೆ
ಆಟಗಳೆಲ್ಲ ಇನ್ನು ಮುಗಿದ ಹಾಗೆ

ಮಗುವಿನ ಕೈಯಲ್ಲಿದ್ದ
ಕಿತ್ತಳೆ ಕೇಳಿತ್ತು…
_”ಇನ್ನು ನನ್ನ ಚರ್ಮಕ್ಕೆ
ಅಂಟಿದ ನೆತ್ತರು
ಒರೆಸಲು ತರುವವರಾರು
ಅರೇಬಿಯಾದ ಅತ್ತರು?”_

– ಬಿ.ಸುರೇಶ
(೩೧ ಜುಲೈ ೨೦೧೬)
(ಕಾಶ್ಮೀರದಲ್ಲಿ ಹೆಣವಾದ ಪುಟ್ಟ ಕಂದಮ್ಮನ ಪೋಟೊ ನೋಡಿ.)


ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 60,851 ಜನರು
Advertisements