Archive for the 'ಕವಿತೆ' Category

ತಾಯಿಯ ಮೂಲಕ ಜಗತ್ತಿನ ತರತಮ ಕಾಣಿಸುವ ಕವಿ ಸತ್ಯಾನಂದ

(ಸತ್ಯಾನಂದ ಪಾತ್ರೋಟ ಅವರ ಅವ್ವಾ ಕವನ ಸಂಕಲನ ಕುರಿತ ಲೇಖನಗಳ ಸಂಗ್ರಹಕ್ಕೆ ಬರೆದ ಲೇಖನ)

ಅವ್ವಾ ಎನ್ನುವುದು ಅಗಾಧ ಪ್ರೀತಿಯ ಕಣಜ. ಜಗತ್ತನ್ನೇ ಹೆತ್ತ ಜೀವಕ್ಕೆ ಪ್ರೀತಿಯ ಹೊರತು ಮತ್ತೇನಿದೆ ಹಂಚುವುದಕ್ಕೆ. ಅಂತಹ ಅವ್ವನನ್ನು ಕುರಿತು ಕನ್ನಡದಲ್ಲಿ ಸಹಸ್ರಾರು ಕವನಗಳು, ಕತೆಗಳು ಬಂದಿವೆ. ಹಲವು ಜನಪ್ರಿಯ ಸಿನಿಮಾಗಳು ಈ ತಾಯಿ ಎಂಬ ಭಾವಕೋಶವನ್ನೇ ಹಿಡಿದು ಹಲವು ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲುವ ಕಥನಗಳನ್ನು ರೂಪಿಸಿವೆ. ಪಿ.ಲಂಕೇಶರ “ಅವ್ವಾ” ತರಹದ ಕವನಗಳು ಆಧುನಿಕ ಸಾಹಿತ್ಯ ವಲಯದಲ್ಲಿ ನಿತ್ಯ ಬದುಕುತ್ತಿದೆ. ಇಂತಹ ಅವ್ವನನ್ನು ಕುರಿತು ನಮ್ಮ ನಡುವಿನ ಅಪರೂಪದ ಕವಿಗಳಲ್ಲಿ ಒಬ್ಬರಾದ ಸತ್ಯಾನಂದ ಪಾತ್ರೋಟ ಅವರು ಹೊಸದೊಂದು ಕವನ ಬರೆದಿದ್ದಾರೆ. Continue reading ‘ತಾಯಿಯ ಮೂಲಕ ಜಗತ್ತಿನ ತರತಮ ಕಾಣಿಸುವ ಕವಿ ಸತ್ಯಾನಂದ’

ಡಿಯರ್ ಡೆಮಾಕ್ರಸಿ

ಡಿಯರ್ ಡೆಮಾಕ್ರಸಿ
(ಮೂಲ ಮರಾಠಿ: ಸಚಿನ್ ಮಾಳಿ
ಹಿಂದಿಯಿಂದ ಕನ್ನಡಕ್ಕೆ ಭಾವಾನುವಾದ: ಬಿ.ಸುರೇಶ)

ಡಿಯರ್ ಡೆಮಾಕ್ರಸಿ ಯೇಳು,
ನಮ್ ಅಸ್ವು ನೀಗ್ಸಾಕ್ ಏನ್ ಕೊಟ್ಟೀಯಾ ತಿನ್ನಾಕ್ಕೆ…?

Continue reading ‘ಡಿಯರ್ ಡೆಮಾಕ್ರಸಿ’

ಅವರು ಕೇಳುತ್ತಾರೆ

(ಮೂಲ ಪದ್ಯ: ಓಟ್ಟೋ ರೆನೆ ಕ್ಯಾಸ್ಟಿಲ್ಲೋ –ಗ್ವಾಟೆಮಾಲಾದ ಕವಿ, ಹೋರಾಟಗಾರ)

(ಭಾವಾನುವಾದ: ಬಿ.ಸುರೇಶ) Continue reading ‘ಅವರು ಕೇಳುತ್ತಾರೆ’

*”ಕಿತ್ತಲೆಯ ಕಳವಳ”*
ಆಟಕ್ಕೆ ಸಿದ್ಧವಿದ್ದೆವು.
ಕೈಯಲ್ಲಿ ಅಮ್ಮನಿತ್ತ ಕಿತ್ತಳೆ ಇತ್ತು.
ಅಡಗಿ ತಿನ್ನಲು ಹಣ್ಣು
ತಾಣ ಹುಡುಕುತ್ತಿತ್ತು ಎಳೆಗಣ್ಣು.

ಆಗವರು ಬಂದರು…
ಠಕ್ ಠಿಕ್ ಠಕ್ ಠಿಕ್
ಬೂಟುಗಾಲಿನ ನಾದದವರು.
ಕಲ್ಲಂಗಡಿಯ ಸಮವಸ್ತ್ರ ತೊಟ್ಟವರು.
ಸಾಲು ಸಾಲು ದೈತ್ಯರು.
ಕೈಯಲ್ಲಿ ಫರಂಗಿ ಗನ್ನು
ಸಿಟ್ಟು ತುಂಬಿದ ಕೆಂಗಣ್ಣು
ಸಿಡಿದಿತ್ತು ಶತಮಾನಗಳ ಹಳೆಯ ಹುಣ್ಣು

ನೋಡುತ್ತಿದ್ದ ಬೆರಗುಗಣ್ಣು
ಬಿದ್ದಿತ್ತು ಬುಡಕಡಿದ ಬಾಳೆಯ ಹಾಗೆ
ಆಟಗಳೆಲ್ಲ ಇನ್ನು ಮುಗಿದ ಹಾಗೆ

ಮಗುವಿನ ಕೈಯಲ್ಲಿದ್ದ
ಕಿತ್ತಳೆ ಕೇಳಿತ್ತು…
_”ಇನ್ನು ನನ್ನ ಚರ್ಮಕ್ಕೆ
ಅಂಟಿದ ನೆತ್ತರು
ಒರೆಸಲು ತರುವವರಾರು
ಅರೇಬಿಯಾದ ಅತ್ತರು?”_

– ಬಿ.ಸುರೇಶ
(೩೧ ಜುಲೈ ೨೦೧೬)
(ಕಾಶ್ಮೀರದಲ್ಲಿ ಹೆಣವಾದ ಪುಟ್ಟ ಕಂದಮ್ಮನ ಪೋಟೊ ನೋಡಿ.)

ನಾ ಪ್ರೀತಿಸುವುದಿಲ್ಲ ಅಷ್ಟೇ

ಟಿಪ್ಪಣಿ:

ಟಿವಿ ಧಾರಾವಾಹಿ ಬರವಣಿಗೆ ಎಂದರೆ ಅದು ಮನಸ್ಸು ಗಿರಗಿಟ್ಲೆ ಆಗುವ ಕೆಲಸ.

ಅಂತಹ ಗಿರಗಿಟ್ಲೆ ಸಮಯ ದಾಟಿಕೊಳ್ಳಲು ನಾ ಕಂಡುಕೊಂಡ ಮಾರ್ಗ ಇದು.

ನಾ ಪ್ರೀತಿಸುವುದಿಲ್ಲ ಅಷ್ಟೇ

ಮೂಲ: ಪ್ಯಾಬ್ಲೋ ನೆರೂಡಾ

ಭಾವಾನುವಾದ: ಬಿ.ಸುರೇಶ

ನಾ ನಿನ್ನ ಪ್ರೀತಿಸುವುದಿಲ್ಲ, ಅಪವಾದ ಎಂಬಂತೆ ಯಾಕೆಂದರೆ ನಾ ನಿನ್ನ ಮಾತ್ರ ಪ್ರೀತಿಸುವೆನಷ್ಟೇ…
ಪ್ರೀತಿಸುವುದರಿಂದ ಪ್ರೀತಿಸದ ಕಡೆಗೆ ಸಾಗುವೆ ಅಷ್ಟೆ…
ಕಾಯುವುದರಿಂದ ಕಾಯದಿರುವಂತಾಗುವೆ ಅಷ್ಟೇ…
ಕೊರೆವ ಮಂಜಿನ ಸ್ಥಿತಿಯಿಂದ ಉರಿವ ಬೆಂಕಿಯ ಕಡೆಗೆ ಸಾಗುವೆ ಅಷ್ಟೇ…

ಪ್ರೀತಿ ಏಕೆಂದರೆ ನನಗಿರುವುದು ಪ್ರೀತಿಯಷ್ಟೇ..
ದ್ವೇಷಿಸುವೆನಾದರೆ ಮತ್ತಷ್ಟು ದ್ವೇಷಿಸುವೆನಷ್ಟೇ…
ಬಾಗುವೆನಷ್ಟೆಂದರೆ ಅದು ನನ್ನ ಪ್ರೀತಿ ಪ್ರಮಾಣದಷ್ಟೇ…
ಕಂಡಿಲ್ಲವಾದರೂ ನನ್ನದು ಕುರುಡು ಪ್ರೀತಿಯಷ್ಟೇ…

ಬರಲಿರುವ ಬೆಳಕು ನನ್ನ ನುಂಗಬಹುದಷ್ಟೇ…
ಹೃದಯವನು ಬೆಳಕಿನ ಕ್ರೌರ್ಯವದು ಸುಡುವುದಷ್ಟೇ…
ಒಳಗಿನ ಬೀಗದ ಕೈ ಕೊಂಡೊಯ್ದ ಮೇಲಾದರು ಶಾಂತಿ ನೆಲೆಸುವುದಷ್ಟೇ…

ಈ ಕಥನದಲ್ಲಿ ಸಾಯುವವ ನಾನಷ್ಟೇ..
ನಾ ಸಾಯುವುದು ಪ್ರೀತಿಗಷ್ಟೇ…
ಯಾಕೆಂದರೆ ನಾ ನಿನ್ನ ಪ್ರೀತಿಸುವೆನಷ್ಟೇ…
ಪ್ರೀತಿಯೆಂದರೆ ಬೆಂಕಿಯೊಡನೆ ರಕ್ತದ ಬೆರೆತು ಹರಿವ ನದಿ ಎಂಬುದೂ ಸತ್ಯವಷ್ಟೇ…

(ಪ್ಯಾಬ್ಲೊ ನೆರೂಡನ ಪದ್ಯದ ಭಾವಾನುವಾದ ಬಿ.ಸುರೇಶ)
(- ೨೫ ಫೆಬ್ರವರಿ ೨೦೧೭ ರಾತ್ರಿ ೧.೩೦)

ಮೂಲ ಕವನದ ಪಾಠ:
I do not love you except because I love you;
I go from loving to not loving you,
From waiting to not waiting for you
My heart moves from cold to fire.

I love you only because it’s you the one I love;
I hate you deeply, and hating you
Bend to you, and the measure of my changing love for you
Is that I do not see you but love you blindly.

Maybe January light will consume
My heart with its cruel
Ray, stealing my key to true calm.

In this part of the story I am the one who
Dies, the only one, and I will die of love because I love you,
Because I love you, Love, in fire and blood.

by Pablo Neruda


ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 107,206 ಜನರು