Archive for the 'ಚಿತ್ರ ವಿಮರ್ಷೆ' Category

ಕಿರುತೆರೆ – ಸಾಮಾಜಿಕ ಜವಾಬ್ದಾರಿ

(೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ೭ ಫೆಬ್ರವರಿ ೨೦೨೦, ಶುಕ್ರವಾರ ಬೆಳಗಿನ ೯.೩೦ರಿಂದ ೧೧ ಗಂಟೆವರೆಗೆ ನಡೆದ ಚಲನಚಿತ್ರ: ಕನ್ನಡ ಸಾಹಿತ್ಯ ಎಂಬ ಗೋಷ್ಟಿಯಲ್ಲಿ ಮಂಡಿಸಲಾದ ಪ್ರಬಂಧ.)

ಎಲ್ಲ ಕನ್ನಡ ಮನಸ್ಸುಗಳಿಗೆ ನಮಸ್ಕಾರಗಳು.

೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸುವ ಅವಕಾಶ ನನಗೆ ಎರಡನೆಯ ಸಲ ಒದಗಿ ಬಂದಿದೆ. ಈ ಹಿಂದೆ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿದ್ದೆ. ಆಗ ಕಡೆಯ ನಿಮಿಷದಲ್ಲಿ ಬರಬೇಕಾದವರು ಬಾರದೆ ಹೋದುದರಿಂದ ಪ್ರೀತಿಯ ಗುರುಗಳಾದ ಚಂಪಾ ಅವರು ನನ್ನನ್ನು `ಬದಲಿ ಆಟಗಾರ’ ಎಂದು ಕರೆದಿದ್ದರು. ಮಾಧ್ಯಮ ಕುರಿತ ಗೋಷ್ಟಿಯಲ್ಲಿ ಗೌರಿ ಲಂಕೇಶ್ ಅವರ ಜೊತೆಗೆ ನಾನೂ ಸಹ ಇದ್ದೆ, ಕಿರುತೆರೆಯ ಬಗ್ಗೆ ಮಾತಾಡಿದ್ದೆ. ಈ ಸಲ ಅಪರೂಪಕ್ಕೆ ನಾನು ಬದಲಿ ಆಟಗಾರ ಅಲ್ಲ. ಅಧ್ಯಕ್ಷರಾದ ಮನು ಬಳಿಗಾರ್ ಅವರು ಖುದ್ದಾಗಿ ನನಗೆ ಕರೆ ಮಾಡಿ ಬರಲು ಸೂಚಿಸಿದರು. ಈ ಆಹ್ವಾನಕ್ಕಾಗಿ ಮನು ಬಳಿಗಾರ್ ಅವರಿಗೆ, ಸಮ್ಮೇಳನಾಧ್ಯಕ್ಷರು ಮತ್ತು ಗುರುಗಳಾದ ಎಚ್ಚೆಸ್ವಿ ಅವರಿಗೆ ಮತ್ತು ಈ ಆಯ್ಕೆಗೆ ಕಾರಣರಾದ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಸಮಿತಿಗಳ ಸದಸ್ಯರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸುತ್ತೇನೆ.
ಇಲ್ಲಿ ಮಾಡುತ್ತಿರುವ ಪ್ರಬಂಧ ಮಂಡನೆಗಾಗಿ ದೊರೆವ ಗೌರವಧನವನ್ನಾಗಲಿ ನನ್ನ ಪ್ರಯಾಣದ ಖರ್ಚನ್ನಾಗಲಿ ನಾನು ಪಡೆಯುವುದಿಲ್ಲ. ಆ ಹಣವನ್ನು ಕನ್ನಡ ನಿಧಿ ಮೂಲಕ ಸದುಪಯೋಗ ಪಡಿಸಿಕೊಳ್ಳಿ ಎಂದು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಕೋರುತ್ತೇನೆ.
ಇಂದಿನ ನನ್ನ ಮಾತುಗಳನ್ನು ಮಂಡಿಸುವ ಮುಂಚೆ ಕೆಲವು ವಿಷಯಗಳನ್ನು ಹೇಳಬೇಕಿದೆ. Continue reading ‘ಕಿರುತೆರೆ – ಸಾಮಾಜಿಕ ಜವಾಬ್ದಾರಿ’

ಕನ್ನಡದ ಪರ‍್ಯಾಯ ಸಿನಿಮಾಗಳ ಸಾಧ್ಯತೆ ಮತ್ತು ವೈಫಲ್ಯ

(ವಿಚಾರ ಸಂಕಿರಣವೊಂದರಲ್ಲಿ ಮಂಡಿಸಲು ಮಾಡಿದ್ದ ಟಿಪ್ಪಣಿಗಳ ತಿದ್ದಿ ಬರೆದ ಲೇಖನ ರೂಪ. ಸಂಗಾತ ಪತ್ರಿಕೆಯ ಜನವರಿ 2020ರ ಸಂಚಿಕೆಯಲ್ಲಿ ಮುದ್ರಣವಾಗಿದೆ.)

ಸಮಕಾಲೀನ ಜಗತ್ತಲ್ಲಿ `ಪರ‍್ಯಾಯ’ ಎಂಬ ಪದವು ಅನೇಕ ಅಪದ್ಧಗಳಿಗೆ ಬಳಕೆಯಾಗುತ್ತಿದೆ, ಧಾರ್ಮಿಕವಾಗಿ ಹಾಗೂ ರಾಜಕೀಯವಾಗಿ. ಹಾಗಾಗಿ ಸಿನಿಮಾದಲ್ಲಿನ ಪರ‍್ಯಾಯ ಎಂಬುದನ್ನು ಮಾತಾಡಬೇಕು ಎಂದಾಗ ಅನುಮಾನ ಗೊಂದಲ ಮೂಡುತ್ತದೆ. ಆದರೆ ಆ ಅನುಮಾನ, ಗೊಂದಲಗಳ ಗೋಜಗುಂಡಲಗಳ ಮೂಲಕವೇ ಆರಂಭವಾದ ಒಂದು ಹುಡುಕಾಟ ಈ ಲೇಖನ ಹುಟ್ಟಲು ಕಾರಣವಾಗಿದೆ ಎಂಬುದಂತೂ ಸತ್ಯ.

ಪರ‍್ಯಾಯವಲ್ಲ ಸಮಾನಾಂತರ
ಈ ಸಿನಿಮಾ ಚಳುವಳಿಯನ್ನು `ಪರ‍್ಯಾಯ’ ಎಂದು ಕರೆಯುವುದಕ್ಕಿಂತ `ಸಮಾನಾಂತರ’ ಎಂದು ಕರೆಯುವುದೇ ಸರಿ. ಏಕೆಂದರೆ ಯಾವುದಕ್ಕೋ ಪರ‍್ಯಾಯ ಎಂಬಂತೆ ಏನಾದರೂ ಹುಟ್ಟುತ್ತದೆ ಎಂದರೆ ಅದು ಹೊಸ ಗೋಜಲಿನದು ಎಂದೇ ಭಾವಿಸಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಒಂದು ಭ್ರಷ್ಟ ಸರ‍್ಕಾರಕ್ಕೆ ಪರ‍್ಯಾಯ ಎಂದು ಜನರೇ ಆರಿಸಿದವರು ಈಗ ಅದೇ ಜನರ ಪೌರತ್ವ ಸಾಬೀತು ಮಾಡು ಎಂದು ಕೇಳುತ್ತಿರುವ ಹಾಗೇ, ಯಾವುದೋ ಹುಳ ಬಂತೆಂದು ತಯಾರಾದ ಹೊಸ ಮಾದರಿಯ ಜಿನೆಟಿಕ್ ಬೀಜಗಳು, ಕ್ರಿಮಿನಾಶಕಗಳು ಅದನ್ನು ಬಳಸಿದ ಜನರಿಗೆ ಹೊಸ ರೋಗಗಳನ್ನು ತರುತ್ತಿರುವ ಹಾಗೆಯೇ – `ಪರ‍್ಯಾಯ’ ಅನ್ನುವುದು ಯಾವತ್ತಿಗೂ ಅಪಾಯಕಾರಿ. ಈಗ ನಾವು ಮಾತಾಡಲು ಹೊರಟಿರುವ ಸಿನಿಮಾ ಚಳುವಳಿಯು ಯಾವತ್ತಿಗೂ ರ‍್ಯಾಯ ಆಗಿರಲಿಲ್ಲ, ಬದಲಿಗೆ ಅದು ಸಮಾನಾಂತರವಾಗಿ ಚಲಿಸಿದ ಒಂದು ಬೃಹತ್ ಪಯಣ. ಈ ಪಯಣದ ಹಾದಿಯನ್ನು ಕುರಿತು ಅದಾಗಲೇ ಹಲವು ಲೇಖನಗಳು, ಪುಸ್ತಕಗಳು ಮತ್ತು ಉಪನ್ಯಾಸಗಳು ಆಗಿವೆ. ಆ ಬಗೆಯ ಚಾರಿತ್ರಿಕ ವಿವರವನ್ನು ಸ್ಥೂಲವಾಗಿ ತಿಳಿಸಿ ಈ ಲೇಖನದ ಮುಖ್ಯ ಉದ್ದೇಶದ ಕಡೆಗೆ ಹೊರಳೋಣ. Continue reading ‘ಕನ್ನಡದ ಪರ‍್ಯಾಯ ಸಿನಿಮಾಗಳ ಸಾಧ್ಯತೆ ಮತ್ತು ವೈಫಲ್ಯ’

ಮಹಿಳೆಯ ಕಣ್ಣಲ್ಲಿ ಪುರುಷ ಲೋಕ

(ಭಾರತೀಹೆಗಡೆ ಅವರ ಲೇಖನಗಳ ಸಂಕಲನಕ್ಕೆ ಮುನ್ನುಡಿ)

ಭಾರತಿ ಹೆಗಡೆ ಅವರು ತಮ್ಮ ಅಂಕಣ ಬರಹಗಳ ಮೂಲಕ ಬಹುಕಾಲದಿಂದ ಪರಿಚಿತರು. ಆದರೆ ಮುಖತಃ ನಾನವರನ್ನು ಭೇಟಿಯಾಗಿರುವುದು ಒಂದೆರಡು ಬಾರಿ ಮಾತ್ರ. ಹೀಗಿದ್ದರೂ ಅವರು ತಮ್ಮ ಲೇಖನಗಳ ಸಂಗ್ರಹಕ್ಕೆ ಮುನ್ನುಡಿ ಬರೆಯಬೇಕೆಂದು ಕೇಳಿದಾಗ ನನಗೆ ಆಶ್ಚರ್ಯವಾಗಿತ್ತು. ನಾನ್ಯಾವ ದೊಡ್ಡ ವಿಮರ್ಶಕ ಎಂದು ಮುನ್ನುಡಿ ಕೇಳುತ್ತಾ ಇದ್ದಾರೆ ಎಂದು ಹಿಂಜರಿದಿದ್ದೆ. ಭಾರತಿ ಅವರು ಬಿಡದೆ ಬೆನ್ನು ಬಿದ್ದರು. ಅವರು ಕಳಿಸಿದ ಲೇಖನ ಮಾಲೆಯಲ್ಲಿದ್ದ ಮುವ್ವತ್ತೈದು ಲೇಖನಗಳನ್ನು ಓದದೆ ತಿಂಗಳ ಕಾಲ ಸುಮ್ಮನಿದ್ದವನು ಒಂದೊಮ್ಮೆ ಓದಿ ಬಿಡುವ ಎಂದು ಆರಂಭಿಸಿದೆ. ಅಚ್ಚರಿ ಎಂಬಂತೆ ಎಲ್ಲಾ ಲೇಖನಗಳೂ ಓದಿಸಿಕೊಂಡು ಹೋದವು. ಒಂದೇ ರಾತ್ರಿಯಲ್ಲಿ ಅಷ್ಟೂ ಲೇಖನಗಳನ್ನು ಓದಿ ಮುಗಿಸಿದೆ. ನಂತರ ಮುನ್ನುಡಿಯಂತಹುದನ್ನು ಬರೆಯಲೆಂದು ಕುಳಿತೆ. ಮೊದಲಿಗೇ ಹೇಳಿಬಿಡುತ್ತೇನೆ, ಇದು ಮುನ್ನುಡಿಯಲ್ಲ, ಪ್ರಾಯಶಃ ಒಂದು ಪುಸ್ತಕಕ್ಕೆ ಪ್ರವೇಶ ದೊರಕಿಸಿಕೊಡುವ ಲೇಖನ ಎನ್ನಬಹುದಷ್ಟೇ. Continue reading ‘ಮಹಿಳೆಯ ಕಣ್ಣಲ್ಲಿ ಪುರುಷ ಲೋಕ’

ಗೆಳೆಯಾ ಕೇಶವಮೂರ್ತಿ ಅವರಿಗೊಂದು ಪತ್ರ (“ಗೇಟ್‍ಕೀಪರ್” ಪುಸ್ತಕ ಕುರಿತು)

ಪ್ರಿಯ ಕೇಶವಮೂರ್ತಿ,
ನೀವು ಬರೆದ ಹೊಸ ಪುಸ್ತಕವನ್ನು ಕುರಿತಂತೆ ಅಭಿಪ್ರಾಯ ಕಳಿಸಿ ಎಂದು “ಗೇಟ್‍ಕೀಪರ್” ಪುಸ್ತಕದ ಕರಡು ಕಳಿಸಿದ್ದಿರಿ. ನನ್ನ ಕೆಲಸದ ಒತ್ತಡದಲ್ಲಿ ಓದುವುದು ಸಾಧ್ಯವಾಗಿರಲಿಲ್ಲ. ಈಚೆಗೆ ಯಾರಿಗೋ ಕಾಯುವ ಹೊತ್ತಲ್ಲಿ ನಿಮ್ಮ ಲೇಖನ ಸಂಗ್ರಹವನ್ನು ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ. ಹೀಗೆ ಹಿಡಿದ ಪುಸ್ತಕವನ್ನು ಕೆಳಗಿಳಿಸದಂತೆ ಬರೆದಿದ್ದೀರಿ ಎಂಬುದೇ ನಿಜಕ್ಕೂ ಮೆಚ್ಚತಕ್ಕ ವಿಷಯ.
ಓದುವುದು ಒಂದು ಕೆಲಸವಾದರೆ. ಓದಿದ್ದರ ಕುರಿತು ಅಭಿಪ್ರಾಯ ಬರೆಯುವುದು ಸಹ ಸಮಯ ಬೇಡುವ ಕೆಲಸ. ಹೇಗೆ ಹೇಗೋ ಸಮಯ ಹೊಂದಿಸಿಕೊಂಡು, ಕಂತುಗಳಲ್ಲಿ ಈ ಪತ್ರದ ಮೂಲಕವೇ ನನ್ನ ಅಭಿಪ್ರಾಯ ದಾಟಿಸುತಿದ್ದೇನೆ. ಈ ಕಂತುಗಳ ಬರವಣಿಗೆಯಲ್ಲಿ ಇರಬಹುದಾದ ಮಿತಿಗಳ ಜೊತೆಗೆ ಇದನ್ನು ಒಪ್ಪಿಸಿಕೊಳ್ಳಿ. Continue reading ‘ಗೆಳೆಯಾ ಕೇಶವಮೂರ್ತಿ ಅವರಿಗೊಂದು ಪತ್ರ (“ಗೇಟ್‍ಕೀಪರ್” ಪುಸ್ತಕ ಕುರಿತು)’

“ಮಲ್ಲಿ” ಎಂಬ ಸಂತೋಷ

ಪ್ರಜಾವಾಣಿ ಪತ್ರಿಕೆಗಾಗಿ (11-11-2012) ಬರೆದ ಲೇಖನ
– ಬಿ.ಸುರೇಶ
ನಮ್ಮ ದೇಶದಲ್ಲಿ ಮಕ್ಕಳ ಸಿನಿಮಾ ಚಳುವಳಿಯು ಆರಂಭವಾಗಿ ಅನೇಕ ದಶಕಗಳಾಗಿವೆ. ಮಕ್ಕಳಿಗಾಗಿ ವಿಶೇಷ ಸಿನಿಮಾ ತಯಾರಿಸಲೆಂದೇ ಕೇಂದ್ರ ಸರ್ಕಾರವು ವಿಶೇಷ ಸಂಸ್ಥೆಯನ್ನೂ ಆರಂಭಿಸಿದೆ. ಅದೂ ಚಿಲ್ಡ್ರನ್ಸ್ ಫಿಲಂ ಸೊಸೈಟಿ ಎಂದು ಆರಂಭವಾಗಿ ಈಗ ಯುವಕರು ಮತ್ತು ಮಕ್ಕಳಿಗಾಗಿ ಸಿನಿಮಾ ಎಂದು ಹೆಸರನ್ನು ಬದಲಿಸಿಕೊಂಡು ಸ್ವತಃ ಮಕ್ಕಳಿಗಾಗಿ ಸಿನಿಮಾ ತಯಾರಿಸುತ್ತಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸಹ ಮಕ್ಕಳ ಸಿನಿಮಾಗಳಿಗೆ ಪ್ರತ್ಯೇಕ ಪ್ರಶಸ್ತಿ ಸಹಾಯಧನ ನೀಡುತ್ತಾ ಇವೆ. ಎರಡು ವರ್ಷಕ್ಕೊಮ್ಮೆ ಮಕ್ಕಳ ಚಲನಚಿತ್ರಗಳ ಉತ್ಸವ ಸಹ ನಡೆಯುತ್ತಾ ಇದೆ. ನಮ್ಮ ರಾಜ್ಯ ಸರ್ಕಾರವಂತೂ ಪ್ರತೀ ವರ್ಷ ಎರಡು ಮಕ್ಕಳ ಸಿನಿಮಾಗಳಿಗೆ ವಿಶೇಷ ಸಹಾಯಧನ ನೀಡುತ್ತಾ ಇದೆ. (ಇದನ್ನು ನಾಲ್ಕು ಚಿತ್ರಗಳಿಗೆ ವಿಸ್ತರಿಸುವ ಆಶ್ವಾಸನೆಯೂ ಸಿಕ್ಕಿದೆ. ಆದೇಶ ಆಗಿಲ್ಲ.) ಇಷ್ಟೆಲ್ಲಾ ಆದರೂ ನಮ್ಮಲ್ಲಿ ತಯಾರಾಗುತ್ತಾ ಇರುವ ಸಿನಿಮಾಗಳು ಮಕ್ಕಳಿಗಾಗಿ ಎಂದು ತಯಾರಾಗುತ್ತಿರುವುದು ಕಡಿಮೆ. ಮಕ್ಕಳ ಸಿನಿಮಾ ಎಂಬ ಹಣೆಪಟ್ಟಿಯನ್ನು ಹೊತ್ತುಕೊಂಡೇ ತಯಾರಾಗುವ ಬಹುತೇಕ ಸಿನಿಮಾಗಳು ಸಹ ಸಂದೇಶ ಹೇಳುವುದಕ್ಕೆ ಅಥವಾ ಮಕ್ಕಳ ಮೂಲಕ ದೊಡ್ಡವರಿಗೆ ಕತೆ ಹೇಳುವುದಕ್ಕೆ ಪ್ರಯತ್ನಿಸುತ್ತಾ ಇರುತ್ತವೆ. ಇಂತಹ ಸಿನಿಮಾಗಳಿಗೆ ಸವಲತ್ತುಗಳು ಸಿಗುತ್ತವಾದರೂ ಮಕ್ಕಳಿಗೆ ಈ ಸಿನಿಮಾಗಳಿಂದ ಲಾಭ ಆಗಿದ್ದು ಕಡಿಮೆ. ಈ ಹಿನ್ನೆಲೆಯಲ್ಲಿ ನಮ್ಮ ದೇಶದಲ್ಲಿ ತಯಾರಾಗಿರುವ ಸಿನಿಮಾಗಳಲ್ಲಿ ನಿಜವಾದ ಅರ್ಥದಲ್ಲಿ ಮಕ್ಕಳ ಸಿನಿಮಾ ಆಗಿರುವ ಒಂದಾದರೂ ಸಿನಿಮಾ ಹುಡುಕಬೇಕೆಂದು (ಕಳೆದ ಎರಡು ದಶಕದ ಅವಧಿಯೊಳಗಿನ) ಸಿನಿಮಾಗಳನ್ನು ಹುಡುಕಿದೆವು. ಅವುಗಳಲ್ಲಿ ಮಕ್ಕಳ ಸಿನಿಮಾ ಎಂದು ಧೈರ್ಯವಾಗಿ ಕರೆಯಬಹುದಾದ ಹಲವು ಸಿನಿಮಾಗಳು ಸಿಕ್ಕವಾದರೂ ವಿಶೇಷವಾಗಿ ಗಮನ ಸೆಳೆದದ್ದು ಸಂತೋಷ್ ಶಿವನ್ ಅವರ ನಿರ್ದೇಶನದ “ಮಲ್ಲಿ”. Continue reading ‘“ಮಲ್ಲಿ” ಎಂಬ ಸಂತೋಷ’


ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 107,206 ಜನರು