Archive for the 'ರಂಗಭೂಮಿ' Category

ಮಹಿಳೆಯ ಕಣ್ಣಲ್ಲಿ ಪುರುಷ ಲೋಕ

(ಭಾರತೀಹೆಗಡೆ ಅವರ ಲೇಖನಗಳ ಸಂಕಲನಕ್ಕೆ ಮುನ್ನುಡಿ)

ಭಾರತಿ ಹೆಗಡೆ ಅವರು ತಮ್ಮ ಅಂಕಣ ಬರಹಗಳ ಮೂಲಕ ಬಹುಕಾಲದಿಂದ ಪರಿಚಿತರು. ಆದರೆ ಮುಖತಃ ನಾನವರನ್ನು ಭೇಟಿಯಾಗಿರುವುದು ಒಂದೆರಡು ಬಾರಿ ಮಾತ್ರ. ಹೀಗಿದ್ದರೂ ಅವರು ತಮ್ಮ ಲೇಖನಗಳ ಸಂಗ್ರಹಕ್ಕೆ ಮುನ್ನುಡಿ ಬರೆಯಬೇಕೆಂದು ಕೇಳಿದಾಗ ನನಗೆ ಆಶ್ಚರ್ಯವಾಗಿತ್ತು. ನಾನ್ಯಾವ ದೊಡ್ಡ ವಿಮರ್ಶಕ ಎಂದು ಮುನ್ನುಡಿ ಕೇಳುತ್ತಾ ಇದ್ದಾರೆ ಎಂದು ಹಿಂಜರಿದಿದ್ದೆ. ಭಾರತಿ ಅವರು ಬಿಡದೆ ಬೆನ್ನು ಬಿದ್ದರು. ಅವರು ಕಳಿಸಿದ ಲೇಖನ ಮಾಲೆಯಲ್ಲಿದ್ದ ಮುವ್ವತ್ತೈದು ಲೇಖನಗಳನ್ನು ಓದದೆ ತಿಂಗಳ ಕಾಲ ಸುಮ್ಮನಿದ್ದವನು ಒಂದೊಮ್ಮೆ ಓದಿ ಬಿಡುವ ಎಂದು ಆರಂಭಿಸಿದೆ. ಅಚ್ಚರಿ ಎಂಬಂತೆ ಎಲ್ಲಾ ಲೇಖನಗಳೂ ಓದಿಸಿಕೊಂಡು ಹೋದವು. ಒಂದೇ ರಾತ್ರಿಯಲ್ಲಿ ಅಷ್ಟೂ ಲೇಖನಗಳನ್ನು ಓದಿ ಮುಗಿಸಿದೆ. ನಂತರ ಮುನ್ನುಡಿಯಂತಹುದನ್ನು ಬರೆಯಲೆಂದು ಕುಳಿತೆ. ಮೊದಲಿಗೇ ಹೇಳಿಬಿಡುತ್ತೇನೆ, ಇದು ಮುನ್ನುಡಿಯಲ್ಲ, ಪ್ರಾಯಶಃ ಒಂದು ಪುಸ್ತಕಕ್ಕೆ ಪ್ರವೇಶ ದೊರಕಿಸಿಕೊಡುವ ಲೇಖನ ಎನ್ನಬಹುದಷ್ಟೇ. Continue reading ‘ಮಹಿಳೆಯ ಕಣ್ಣಲ್ಲಿ ಪುರುಷ ಲೋಕ’

Advertisements

ಆರೋಗ್ಯಕರ ಸಮಾಜ ಸೃಷ್ಟಿಯಲ್ಲಿ ರಂಗ ಸಂಘಟನೆಯ ಪಾತ್ರ

(ಸಿಂಧುವಳ್ಳಿ ಅನಂತಮೂರ್ತಿ ನೆನಪಿಗಾಗಿ ಹೊರತರುತ್ತಾ ಇರುವ ಸಂಸ್ಮರಣ ಗ್ರಂಥಕ್ಕೆ ಸಭೆಯೊಂದರಲ್ಲಿ ಆಡಿದ ಮಾತನ್ನು ಲೇಖನವಾಗಿಸಲಾಗಿದೆ.)
ರಂಗಭೂಮಿ ಎನ್ನುವುದು ಸಂಘಟಿತ ಸಮುದಾಯದ ಪ್ರಯತ್ನ. ನಾಟಕ ಮಾಡುವ ಜನರಂತೆಯೇ ನಾಟಕ ನೋಡುವವರನ್ನು ಸಹ ಸಂಘಟಿಸಿ ಒಂದೆಡೆ ಸೇರಿಸಿದ ನಂತರವೇ ನಾಟಕವನ್ನು ಪ್ರದರ್ಶಿಸಲು ಸಾಧ್ಯ. ಇಲ್ಲಿ ಇಬ್ಬಗೆಯ ಸಂಕಟ ಮತ್ತು ಸವಾಲುಗಳಿವೆ. ಮೊದಲನೆಯದು; ನಾಟಕ ಮಾಡುವ ತಂಡವನ್ನು ಸಂಘಟಿಸುವುದು, ಎರಡನೆಯದು; ಆ ನಾಟಕದ ಪ್ರದರ್ಶನಕ್ಕೆ ನೋಡುಗರನ್ನು ಸಂಘಟಿಸುವುದು. ಇವೆರಡೂ ಕೆಲಸಗಳೂ ಒಂದೇ ಬಗೆಯದಲ್ಲ ಹಾಗೂ ಸುಲಭಕ್ಕೆ ಗೆಲುವು ಸಾಧಿಸಬಹುದಾದ್ದೂ ಅಲ್ಲ. ಅದರಲ್ಲಿಯೂ ಸಣ್ಣ ಸಣ್ಣ ಊರುಗಳಲ್ಲಿ, ಬಡಾವಣೆಗಳಲ್ಲಿ ಇಂತಹ ಜನ ಸೇರಿಸುವ ಕೆಲಸ ಮಾಡುವವರು ಎದುರಿಸುವ ಸಮಸ್ಯೆಗಳನ್ನು ಅರಿತಾಗ ಈ ಸಂಘಟನೆ ಎಂಬುದು ಎಷ್ಟು ತ್ರಾಸಿನ ಕೆಲಸ ಎಂಬುದು ಅರಿವಾಗುತ್ತದೆ. ಈ ಸಂಘಟನೆಯ ಕೆಲಸದ ಆಳಗಳೇನು? ಈ ಕೆಲಸ ಮಾಡುವ ಕ್ರಮ ಏನು? ಎಂದು ಕಲಿಸುವ ಶಾಲೆಗಳು ಸಹ ನಮ್ಮಲ್ಲಿ ಇಲ್ಲ. ಇರುವ ರಂಗಶಾಲೆಗಳಲ್ಲಿಯು ಅಭಿನಯ, ನಿರ್ದೇಶನ ಇನ್ನಿತರ ತಾಂತ್ರಿಕ ಕೌಶಲಗಳನ್ನು ಹೇಳಿಕೊಡುತ್ತಾರೆ. ಆದರೆ ಸಂಘಟನೆ ಮಾಡುವುದು ಹೇಗೆ ಎಂಬ ಪಾಠ ಎಲ್ಲಿಯೂ ಇದ್ದಂತಿಲ್ಲ. ಹಾಗಾಗಿಯೇ ಯಾವ ತರಬೇತಿಯೂ ಇಲ್ಲದೆ ನಿರಂತರವಾಗಿ ಸಂಘಟನೆಯನ್ನು ಮಾಡುತ್ತಾ, ರಂಗಚಳುವಳಿಯನ್ನು ಜೀವಂತವಾಗಿ ಇರಿಸುವ ಮತ್ತು ಹವ್ಯಾಸೀ ಚಟುವಟಿಕೆಯಾಗಿ ಆರಂಭವಾದುದನ್ನು ಸಹ ವೃತ್ತಿಪರವಾಗಿ ಸಂಘಟಿಸುವ ವ್ಯಕ್ತಿಗಳ ಬಗ್ಗೆ ನನಗೆ ಅಪಾರ ಗೌರವ. Continue reading ‘ಆರೋಗ್ಯಕರ ಸಮಾಜ ಸೃಷ್ಟಿಯಲ್ಲಿ ರಂಗ ಸಂಘಟನೆಯ ಪಾತ್ರ’

ರೆಕ್ಕೆ ಕಟ್ಟುವಿರಾ (ನಾಟಕ)

ರೆಕ್ಕೆ ಕಟ್ಟುವಿರಾ ನಾಟಕವು ಜಪಾನಿನ ಹಿರೋಷಿಮ ಮೇಲೆ ಆದ ಅಣುಬಾಂಬ್ ಕುರಿತ ನಾಟಕ.

ಇದನ್ನು ದು.ಸರಸ್ವತಿ – ಚಿತ್ರಾ ಅವರ ಜೊತೆ ಸೇರಿಕೊಂಡು ಕಟ್ಟಲಾಯಿತು.

rekke-kattuvira

ಷಾಪುರದ ಸೀನಿಂಗಿ – ಸತ್ಯ (ನಾಟಕ)

ಷಾಪುರದ ಸೀನಿಂಗಿ – ಸತ್ಯ ನಾಟಕವು 1996ರ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪಡೆದ ನಾಟಕ ಕೃತಿ.

shaapuradha-siningi-sathya

ಬಾಳೂರ ಗುಡಿಕಾರ (ನಾಟಕ)

ಹೆನ್ರಿಕ್ ಇಬ್ಸೆನ್ ಬರೆದ MASTER BUILDER ನಾಟಕವನ್ನಾಧರಿಸಿದ ರೂಪಾಂತರಿತ ನಾಟಕ ಕೃತಿ

baalura-gudikaara

ಗಿರಿಜಾ ಕಲ್ಯಾಣ(ನಾಟಕ)

ಗಿರಿಜಾ ಕಲ್ಯಾಣ – ಆಧುನಿಕ ಪುರಾಣ

ರೈತರ ಆತ್ಮಹತ್ಯೆಗಳ ಹಿನ್ನೆಲೆಯಲ್ಲಿ ಗಂಡನನ್ನು ಕಳೆದುಕೊಂಡ ಗಿರಿಜಾ ಎಂಬ ನವಸಾಕ್ಷರೆ ಅನುಭವಿಸುವ ಸಂಕಟಗಳನ್ನು ಕುರಿತ ನಾಟಕ

girija-kalyana

ಕಾಡು ಮಲ್ಲಿಗೆ (ನಾಟಕ)

ವ್ಯಾಸರಾಯ ಬಲ್ಲಾಳರ ಇದೇ ಹೆಸರಿನ ಕತೆಯನ್ನಾಧರಿಸಿದ ನಾಟಕ ರೂಪ

kaadu-mallige


ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 62,245 ಜನರು
Advertisements