Archive for the 'ನಾಟಕ ವಿಮರ್ಶೆ' Category

ನೆಮ್ಮದಿಯನರಸುವವರ ಸುತ್ತಾ

(ಶಶಿರಾಜ್ ಕಾವೂರು ಅವರ “ನೆಮ್ಮದಿ ಅಪಾರ್ಟ್‍ಮೆಂಟ್” ನಾಟಕಕ್ಕೆ ಬರೆದ ಮುನ್ನುಡಿ)
ನವ್ಯೋತ್ತರ ಎಂದು ಗುರುತಿಸಲಾಗುವ ಹೊಸ ವಿನ್ಯಾಸದ ಬದುಕಿಗೆ ಸುಮಾರು ನಾಲ್ಕು ದಶಕಗಳ ಇತಿಹಾಸವಿದೆ. ಭಾರತಕ್ಕೆ ಇದರ ಪ್ರವೇಶವಾಗಿದ್ದು ಕಳೆದ ಶತಮಾನದ ಅಂತ್ಯದಲ್ಲಿ. ಜ್ಯಾಮಿತಿಯ ರೇಖೆಗಳ ಹಾಗಿರುವ ನಗರಗಳ ಮತ್ತು ಕಟ್ಟಡಗಳ ಸೃಷ್ಟಿ ಈ ನವ್ಯೋತ್ತರ ವಿನ್ಯಾಸದ ಹೆಗ್ಗುರುತು. ಇಂದು ನಮ್ಮ ನಡುವಿನ ಬಹುತೇಕ ಮಹಾನಗರಿಗಳು ನವ್ಯೋತ್ತರ ವಿನ್ಯಾಸದ್ದೇ ಕೊಡುಗೆ. ನಮ್ಮ ದೇಶದಲ್ಲಿ ಮೊದಲು ಮುಂಬಯಿ ಶಹರದಲ್ಲಿ ಆರಂಭವಾದ ಈ ಬೃಹತ್ ಜ್ಯಾಮಿತಿಯ ನಿರ್ಮಾಣಗಳು ನವವಸಾಹತುಶಾಹಿಯ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳನ್ನೂ ತಲುಪಿವೆ. ಅಪಾರ್ಟ್‍ಮೆಂಟ್ ಎಂಬುದು ನಮ್ಮ ನಗರಗಳ ಕ್ಲಿತಿಜದ ಗೆರೆಗಳನ್ನು ಸಂಪೂರ್ಣವಾಗಿ ಬದಲಿಸಿವೆ. ಯಾವ ನಗರಕ್ಕೆ ಹೋದರೂ ಆ ನಗರವು ತನ್ನದೆಂಬ ವ್ಯಕ್ತಿತ್ವವನ್ನು ಕಳೆದುಕೊಂಡು ಸಮವಸ್ತ್ರ ತೊಟ್ಟಂತೆ ಕಾಣುತ್ತಿದೆ. ಬಹುತೇಕ ಎಲ್ಲಾ ನಗರಗಳ ಅಂಗಡಿ ಮುಂಗಟ್ಟುಗಳ ಬಣ್ಣಗಳ ಆಯ್ಕೆಯೂ ಸಹ ನವವಸಾಹತುಶಾಹಿಯ ಪ್ರಭಾವದ್ದೇ ಆಗಿವೆ. ಹೀಗಾಗಿ ನಮ್ಮ ನಗರಗಳ ವಾಸ್ತುವಿನ್ಯಾಸದ ಹಾಗೆ ಮನುಷ್ಯರ ಮನಸ್ಸುಗಳು ಕೂಡ ಸರಕು ಸಂಸ್ಕøತಿ ಜನ್ಯವಾಗಿದೆ ಹಾಗೂ ಹೃದಯಹೀನ ನೀರಸತೆಯ ಕಡೆಗೆ ವಾಲುತ್ತಿದೆ. ಜಗತ್ತಿನಾದ್ಯಂತ ಕಲಾವಿದರು ಸಹ ಈ ವಿಷಯದ ಬಗ್ಗೆ ಕಲಾಕೃತಿಗಳನ್ನು ರಚಿಸುತ್ತಾ ಇದ್ದಾರೆ ಹಾಗೂ ಅರ್ಥಹೀನ ಅಭಿವೃದ್ಧಿಯು ನಾಗರೀಕತೆಗೆ ಮಾರಕ ಎಂದು ಹೇಳುತ್ತಾ ಇದ್ದಾರೆ. ಈ ಹಾದಿಯಲ್ಲಿ ಮತ್ತೊಂದು ಪ್ರಯೋಗ “ನೆಮ್ಮದಿ ಅಪಾರ್ಟ್‍ಮೆಂಟ್ಸ್”. ಶಶಿರಾಜ್ ಕಾವೂರ್ ಅವರು ಬರೆದಿರುವ ಈ ನಾಟಕವು ಅದಾಗಲೇ ಹಲವು ರಂಗಪ್ರದರ್ಶನಗಳನ್ನು ಯಶಸ್ವ್ವಿಯಾಗಿ ಕಂಡಿದೆ. ಈಗ ಈ ನಾಟಕ ಪಠ್ಯವು ಮುದ್ರಣವೂ ಆಗಿ ರಂಗಾಸಕ್ತರನ್ನು ಮುಟ್ಟುತ್ತಿದೆ ಎಂಬುದು ಸಂತಸದ ಸಂಗತಿ. Continue reading ‘ನೆಮ್ಮದಿಯನರಸುವವರ ಸುತ್ತಾ’

“ನಿರಂತರ, ಮೈಸೂರು” ರಂಗತಂಡದ’ಒಂದಷ್ಟು ಪ್ರಶ್ನೆಗಳು – ಬಿ.ಸುರೇಶ ಉತ್ತರಗಳು

ಮೈಸೂರಿನ ರಂಗತಂಡ “ನಿರಂತರ”ದವರು ಹಲವರಿಗೆ ಕೆಲವು ಪ್ರಶ್ನೆ ಕೇಳಿದ್ದರು. ಆ ಪ್ರಶ್ನೆಗಳಿಗೆ ನಾನು ನೀಡಿದ ಉತ್ತರ ಇಲ್ಲಿದೆ. ಪ್ರಧಾನವಾಗಿ ರಂಗ ನಾಟಕಗಳ ವಿಮರ್ಶೆಯನ್ನು ಕುರಿತ ಈ ಪ್ರಶ್ನೋತ್ತರವು ನಿಮಗೂ ಉಪಯುಕ್ತವಾಗಬಹುದು ಎಂದು ಭಾವಿಸಿದ್ದೇನೆ. Continue reading ‘“ನಿರಂತರ, ಮೈಸೂರು” ರಂಗತಂಡದ’ಒಂದಷ್ಟು ಪ್ರಶ್ನೆಗಳು – ಬಿ.ಸುರೇಶ ಉತ್ತರಗಳು’

“ಪಿಯಾ ಬಹುರೂಪಿಯಾಽ… ಎಂಬ ಅಪರೂಪದ ಪ್ರಯೋಗ”

 

ಮುಂಬಯಿಯ ಕಂಪೆನಿ ಥಿಯೇಟರ್ ಕಳೆದ ಮೂರು ವರ್ಷಗಳಿಂದ “ಪಿಯಾ ಬಹುರೂಪಿಯಾಽ!” ನಾಟಕವನ್ನು ಪ್ರದರ್ಶನ ಮಾಡುತ್ತಾ ಇದೆ. ಷೇಕ್ಸ್‍ಪಿಯರ್‍ನ “ಟ್ವೆಲ್ತ್ ನೈಟ್” ನಾಟಕದ ಭಾರತೀಯ ರೂಪಾಂತರವಿದು. ಮೂಲ ಷೇಕ್ಸ್‍ಪಿಯರ್‍ನ ನಾಟಕವೇ ಅತೀ ಜನಪ್ರಿಯವಾದ ಕೃತಿ. ಜಗತ್ತಿನ ಎಲ್ಲಾ ಮೂಲೆಗಳಲ್ಲೂ ಪ್ರದರ್ಶನ ಕಂಡಿರುವ ಕೃತಿ. ಈ ನಾಟಕವು ಕನ್ನಡದ “ಸದಾರಮೆ”ಯಂತಹ ನಾಟಕಕ್ಕೂ ಮೂಲ ಸಾಮಗ್ರಿ ಒದಗಿಸಿದ ಕೃತಿ ಎಂದರೆ ತಪ್ಪಾಗಲಾರದು. ಷೇಕ್ಸ್‍ಪಿಯರ್ ಬರೆದ ಹಾಸ್ಯ ನಾಟಕಗಳಲ್ಲಿ “ಮಿಡ್‍ಸಮ್ಮರ್ ನೈಟ್‍ ಡ್ರೀಂ” ನಂತರ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ ನಾಟಕವಿದು. ಇದೇ ನಾಟಕವನ್ನು ದ್ವಾದಶ ರಾತ್ರ ಎಂದು ಕನ್ನಡಕ್ಕೆ ತಂದಿದ್ದಾರೆ. ಆದರೆ ಇಂತಹ ನಾಟಕವನ್ನು ಪಾತ್ರದ ಹೆಸರುಗಳನ್ನು ಮೂಲದಂತೆಯೇ ಇರಿಸಿ ಪಾತ್ರದ ಪರಿಸರವನ್ನು ಮಾತ್ರ ಭಾರತೀಯಗೊಳಿಸುವುದು ಅತ್ಯಂತ ಕಷ್ಟದ ಕೆಲಸ. ಜೊತೆಗೆ ಅದನ್ನು ಮೂಲ ನಾಟಕದಷ್ಟೇ ಸಂಗೀತಮಯಗೊಳಿಸುವುದು ಮತ್ತೂ ಕಷ್ಟದ ಕೆಲಸ.

ಕಂಪೆನಿ ಥಿಯೇಟರ್‍ ತಂಡ ಅತುಲ್‍ ಕುಮಾರ್ ಅವರ ನಿರ್ದೇಶನದಲ್ಲಿ ಕಟ್ಟಿರುವ ಬಹುರೂಪಿಯಾಽ ಅಸಾಧ್ಯಗಳನ್ನು ಸರಳವಾಗಿ ಸಾಧಿಸಿದೆ. ಗ್ಲೋಬ್ ಥಿಯೇಟರ್, ಲಂಡನ್‍ನವರು ನಡೆಸುವ ಷೇಕ್ಸ್‍ಪಿಯರ್ ನಾಟಕದ ಉತ್ಸವಕ್ಕಾಗಿ ತಯಾರಾದ ನಾಟಕವಿದು. ಲಂಡನ್‍ನಲ್ಲಿ ಮೊದಲ ಪ್ರದರ್ಶನವಾದಾಗ ತಮ್ಮ ದೇಶದ ನಾಟಕಕಾರನ ಕೃತಿಯೊಂದನ್ನು ಹೀಗೆ ಭಾರತೀಯಗೊಳಿಸಿರುವುದನ್ನು ಕಂಡು ಲಂಡನ್ನಿನ ರಂಗಪ್ರೇಮಿಗಳು ಐದಾರು ನಿಮಿಷ ಎಡಬಿಡದೆ ಕರತಾಡನ ಮಾಡಿದ ನಾಟಕವಿದು. Continue reading ‘“ಪಿಯಾ ಬಹುರೂಪಿಯಾಽ… ಎಂಬ ಅಪರೂಪದ ಪ್ರಯೋಗ”’

ನಾಟಕವಾಗುವ ದಾರಿಯಲ್ಲಿ… ‘ಕಳೆದುಹೋದವರು’

(ಮುಮ್ಮಡಿ ಕೃಷ್ಣರಾಜ ಒಡೆಯರನ್ನು ಕುರಿತ ಐತಿಹಾಸಿಕ ನಾಟಕ, ಲೇಖಕರು: ಡಿ.ಎ.ಶಂಕರ್. ಪ್ರಕಾಶಕರು: ಸಂವಹನ ಪ್ರಕಾಶನ, ೧೨/೧ಎ, ಈವ್ನಿಂಗ್ ಬಜಾರ್ ಹಿಂಭಾಗ, ಶಿವರಾಂಪೇಟೆ, ಮೈಸೂರು – ೫೭೦೦೦೧, ಡೆಮಿ ಅಷ್ಟದಳ/ ಮೊದಲ ಮುದ್ರಣ:೨೦೧೧/ ೮೦ ಪುಟ/ಬೆಲೆ- ೫೦ರೂ.)

(ಈ ಲೇಖನವು ಪ್ರಜಾವಾಣಿಯ ಸಾಪ್ತಾಹಿಕ ಪುರವಣೆಯಲ್ಲಿ ೩೦ ಅಕ್ಟೋಬರ್ ೨೦೧೧ರಂದು ಪ್ರಕಟವಾಗಿದೆ)

ಐತಿಹಾಸಿಕ ನಾಟಕವೊಂದನ್ನು ರಚಿಸುವುದು ಯಾವತ್ತಿಗೂ ಕಷ್ಟದ ಕೆಲಸ. ಯಾವ ದೃಷ್ಟಿಕೋನದಿಂದ ಒಂದು ಕಾಲಘಟ್ಟದ ಇತಿಹಾಸವನ್ನು ನೊಡಬೇಕು ಎಂಬುದೇ ನಾಟಕಕಾರನ ಮುಂದೆ ದೊಡ್ಡ ಸವಾಲಾಗಿ ಬಿಡುತ್ತದೆ. ಹೀಗಾಗಿಯೇ ಸಮಕಾಲೀನ ಕಾಲಘಟ್ಟದಲ್ಲಿ ಐತಿಹಾಸಿಕ ವಸ್ತುವನ್ನು ನಾಟಕವಾಗಿಸಿದವರ ಸಂಖ್ಯೆ ಕಡಿಮೆ. ಇದಕ್ಕೆ ಒಂದು ಕಾಲದಲ್ಲಿ ಆಗಿಹೋದ ಘಟನೆಯನ್ನು ಇಂದು ನಮ್ಮೆದುರಿಗೆ ಇರುವ ಅನೇಕ ರಾಜಕೀಯ ಹಾಗೂ ತತ್ವಗಳ ಮೂಸೆಯಲ್ಲಿ ಇಟ್ಟು ನೋಡಿದಾಗ, ಐತಿಹಾಸಿಕ ವಿವರಗಳ ನಡುವೆ ಯಾರು ನಾಯಕರಾಗಬೇಕು, ಪ್ರತಿನಾಯಕರಾರು ಎಂಬ ಪ್ರಶ್ನೆಗೆ ಉತ್ತರಿಸುವುದೇ ನಾಟಕಕಾರರಿಗೆ ಬೃಹದಾಕಾರದ ಸಮಸ್ಯೆ ಆಗಿಬಿಡುವುದು ಪ್ರಧಾನ ಕಾರಣ. ಇದರಾಚೆಗೆ ಐತಿಹಾಸಿಕ ವಿವರವೊಂದರ ಒಳಗಿರುವ ನಾಟಕೀಯ ಹೂರಣವನ್ನು ಕಟ್ಟಿಕೊಡುವಾಗ ಇತಿಹಾಸಕ್ಕೆ ಬದ್ಧವಾಗಬೇಕೋ ನಾಟಕೀಯ ಗುಣಗಳಿಗೆ ಬದ್ಧವಾಗಬೇಕೋ ಎಂಬ ದ್ವಂದ್ವವೂ ಸಹ ನಾಟಕಕಾರರನ್ನು ಕಾಡುತ್ತದೆ. ಈ ಕಾರಣಗಳಿಂದಾಗಿಯೇ ಕನ್ನಡದಲ್ಲಿ ಬಂದಿರುವ ಐತಿಹಾಸಿಕ ನಾಟಕಗಳಲ್ಲಿ ಗಿರೀಶರ ‘ತುಘಲಕ್’ ‘ತಲೆದಂಡ’, ಲಂಕೇಶರ ‘ಗುಣಮುಖ’ಗಳಂತೆ ಇನ್ನುಳಿದ ಐತಿಹಾಸಿಕ ನಾಟಕಗಳು ಸಾರ್ವಕಾಲಿಕ ಎಂಬಂತೆ ಜನಮಾನಸದ ನೆನಪಲ್ಲಿ ಉಳಿದಿಲ್ಲ. ಇನ್ನು ಕೆಲವು ಐತಿಹಾಸಿಕ ನಾಟಕಗಳು ತಮ್ಮ ವಾಚಾಳಿತನದಿಂದಾಗಿ ಮಾತ್ರ ನೆನಪಲ್ಲಿ ಉಳಿದಿರುವುದನ್ನು ಗಮನಿಸಬಹುದು. ಈ ಎಲ್ಲಾ ವಿವರಗಳ ಹಿನ್ನೆಲೆಯಲ್ಲಿ ಮೈಸೂರಿನ ಅರಸುಕುಲದ ಟಿಪ್ಪು ಸುಲ್ತಾನ್ ನಂತರದ ಕಾಲಘಟ್ಟವನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜೀವನದ ಸುತ್ತ ಹೆಣೆದ ವಿವರವನ್ನು ಕನ್ನಡದ ಪ್ರಸಿದ್ಧ ಚಿಂತಕ ಹಾಗೂ ಸಾಹಿತಿಗಳಾದ ಡಿ.ಎ.ಶಂಕರ್ ಅವರು ‘ಕಳೆದುಹೋದವರು’ ಎಂಬ ಹೆಸರಿನಲ್ಲಿ ನಾಟಕವಾಗಿಸಿರುವುದು ಸ್ತುತ್ಯರ್ಹ ಪ್ರಯತ್ನ. Continue reading ‘ನಾಟಕವಾಗುವ ದಾರಿಯಲ್ಲಿ… ‘ಕಳೆದುಹೋದವರು’’


ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 107,206 ಜನರು