Archive for the 'Screenplay' Category

ಕನ್ನಡದ ಪರ‍್ಯಾಯ ಸಿನಿಮಾಗಳ ಸಾಧ್ಯತೆ ಮತ್ತು ವೈಫಲ್ಯ

(ವಿಚಾರ ಸಂಕಿರಣವೊಂದರಲ್ಲಿ ಮಂಡಿಸಲು ಮಾಡಿದ್ದ ಟಿಪ್ಪಣಿಗಳ ತಿದ್ದಿ ಬರೆದ ಲೇಖನ ರೂಪ. ಸಂಗಾತ ಪತ್ರಿಕೆಯ ಜನವರಿ 2020ರ ಸಂಚಿಕೆಯಲ್ಲಿ ಮುದ್ರಣವಾಗಿದೆ.)

ಸಮಕಾಲೀನ ಜಗತ್ತಲ್ಲಿ `ಪರ‍್ಯಾಯ’ ಎಂಬ ಪದವು ಅನೇಕ ಅಪದ್ಧಗಳಿಗೆ ಬಳಕೆಯಾಗುತ್ತಿದೆ, ಧಾರ್ಮಿಕವಾಗಿ ಹಾಗೂ ರಾಜಕೀಯವಾಗಿ. ಹಾಗಾಗಿ ಸಿನಿಮಾದಲ್ಲಿನ ಪರ‍್ಯಾಯ ಎಂಬುದನ್ನು ಮಾತಾಡಬೇಕು ಎಂದಾಗ ಅನುಮಾನ ಗೊಂದಲ ಮೂಡುತ್ತದೆ. ಆದರೆ ಆ ಅನುಮಾನ, ಗೊಂದಲಗಳ ಗೋಜಗುಂಡಲಗಳ ಮೂಲಕವೇ ಆರಂಭವಾದ ಒಂದು ಹುಡುಕಾಟ ಈ ಲೇಖನ ಹುಟ್ಟಲು ಕಾರಣವಾಗಿದೆ ಎಂಬುದಂತೂ ಸತ್ಯ.

ಪರ‍್ಯಾಯವಲ್ಲ ಸಮಾನಾಂತರ
ಈ ಸಿನಿಮಾ ಚಳುವಳಿಯನ್ನು `ಪರ‍್ಯಾಯ’ ಎಂದು ಕರೆಯುವುದಕ್ಕಿಂತ `ಸಮಾನಾಂತರ’ ಎಂದು ಕರೆಯುವುದೇ ಸರಿ. ಏಕೆಂದರೆ ಯಾವುದಕ್ಕೋ ಪರ‍್ಯಾಯ ಎಂಬಂತೆ ಏನಾದರೂ ಹುಟ್ಟುತ್ತದೆ ಎಂದರೆ ಅದು ಹೊಸ ಗೋಜಲಿನದು ಎಂದೇ ಭಾವಿಸಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಒಂದು ಭ್ರಷ್ಟ ಸರ‍್ಕಾರಕ್ಕೆ ಪರ‍್ಯಾಯ ಎಂದು ಜನರೇ ಆರಿಸಿದವರು ಈಗ ಅದೇ ಜನರ ಪೌರತ್ವ ಸಾಬೀತು ಮಾಡು ಎಂದು ಕೇಳುತ್ತಿರುವ ಹಾಗೇ, ಯಾವುದೋ ಹುಳ ಬಂತೆಂದು ತಯಾರಾದ ಹೊಸ ಮಾದರಿಯ ಜಿನೆಟಿಕ್ ಬೀಜಗಳು, ಕ್ರಿಮಿನಾಶಕಗಳು ಅದನ್ನು ಬಳಸಿದ ಜನರಿಗೆ ಹೊಸ ರೋಗಗಳನ್ನು ತರುತ್ತಿರುವ ಹಾಗೆಯೇ – `ಪರ‍್ಯಾಯ’ ಅನ್ನುವುದು ಯಾವತ್ತಿಗೂ ಅಪಾಯಕಾರಿ. ಈಗ ನಾವು ಮಾತಾಡಲು ಹೊರಟಿರುವ ಸಿನಿಮಾ ಚಳುವಳಿಯು ಯಾವತ್ತಿಗೂ ರ‍್ಯಾಯ ಆಗಿರಲಿಲ್ಲ, ಬದಲಿಗೆ ಅದು ಸಮಾನಾಂತರವಾಗಿ ಚಲಿಸಿದ ಒಂದು ಬೃಹತ್ ಪಯಣ. ಈ ಪಯಣದ ಹಾದಿಯನ್ನು ಕುರಿತು ಅದಾಗಲೇ ಹಲವು ಲೇಖನಗಳು, ಪುಸ್ತಕಗಳು ಮತ್ತು ಉಪನ್ಯಾಸಗಳು ಆಗಿವೆ. ಆ ಬಗೆಯ ಚಾರಿತ್ರಿಕ ವಿವರವನ್ನು ಸ್ಥೂಲವಾಗಿ ತಿಳಿಸಿ ಈ ಲೇಖನದ ಮುಖ್ಯ ಉದ್ದೇಶದ ಕಡೆಗೆ ಹೊರಳೋಣ. Continue reading ‘ಕನ್ನಡದ ಪರ‍್ಯಾಯ ಸಿನಿಮಾಗಳ ಸಾಧ್ಯತೆ ಮತ್ತು ವೈಫಲ್ಯ’

ಬಿ.ಸುರೇಶ ಅವರ “ಉಪ್ಪಿನ ಕಾಗದ”

 

ಕಥಾಸಾರಾಂಶ

ವಿಘಟನೆ ಹೆಚ್ಚಾಗುತ್ತಿರುವ ಕಾಲಘಟ್ಟದಲ್ಲಿ ಕೂಡಿ ಬಾಳುವುದು ಮುಖ್ಯ. ಕೂಡಿ ಬಾಳುವ ಸಮಾಜದಲ್ಲಿ ಇರಬಹುದಾದ ಓರೆಕೋರೆಗಳನ್ನು ತಿದ್ದುವುದಕ್ಕೆ ಉಪ್ಪಿನ ಕಾಗದವಿರುವುದೂ ಅಗತ್ಯ ಎಂದು ಹೇಳುವ ಕಥನವಿದು.
ಆಚಾರಿ ಒಬ್ಬ ಬಡಗಿ. ಆ ಊರಿನ ಎಲ್ಲಾ ಧರ್ಮದ ದೇವಸ್ಥಾನಗಳಿಗೆ ಆಚಾರಿಯೇ ಚಿತ್ತಾರದ ಬಾಗಿಲು, ಧ್ವಜಸ್ತಂಭ, ತೇರು, ಪಲ್ಲಕ್ಕಿ ಮಾಡುವವನು. ಹಳತನ್ನು ದುರಸ್ತಿ ಸಹ ಮಾಡುವವನು. ನದಿ ತೀರದಲ್ಲಿನ್ನ ತನ್ನ ಮನೆಯಲ್ಲಿ ಸದಾ ಕಾಲ ಉಪ್ಪಿನ ಕಾಗದ ಹಿಡಿದು ಚಿತ್ತಾರ ಸೃಷ್ಟಿಸುವ ಆಚಾರಿಯ ಕೌಶಲ್ಯಕ್ಕೆ ಇಡೀ ಊರು ಮಾರುಹೋಗಿದೆ. ಹಾಗಾಗಿ ಆಚಾರಿಗೆ ಆ ಊರಿನ ದೇವಸ್ಥಾನಗಳಲ್ಲಿ ಹಲವು ಸನ್ಮಾನಗಳು ಸಹ ಆಗಿವೆ. ಇವೆಲ್ಲವುಗಳ ನಡುವೆ ಮಾತಿಲ್ಲದ ಮೌನ ಲೋಕದಲ್ಲಿ ಸದಾ ಯಾವುದೋ ದುಃಖದಲ್ಲಿ ಇರುವವನಂತೆ ಬದುಕುವ ಆಚಾರಿಯ ಏಕೈಕ ಜೊತೆಗಾರ ಚಿನ್ನಯ್ಯ. ಆತನೇ ಆಚಾರಿಯ ಹೊರಜಗತ್ತಿನ ಸಂಪರ್ಕ. ಸದಾ ಮಾತಾಡುವ ಚಿನ್ನಯ್ಯನು ಮಾತೇ ಆಡದ ಆಚಾರಿಯ ಜೊತೆಗೆ ವೈರುಧ್ಯವೆಂಬಂತೆ ಬದುಕುತ್ತಾ ಇದ್ದಾನೆ.
ಇಂತಹ ಆಚಾರಿಯ ಮನೆಗೆ ಒಂದು ದಿನ ದಿಢೀರನೆ ಬರುವ ಯುವತಿ ನಯನಾಳು ತಾನು ಆಚಾರಿಯ ಮಗಳು ಎನ್ನುತ್ತಾಳೆ. ಮಡದಿಗೆ ಹೆಣ್ಣು ಮಗು ಹುಟ್ಟಿತೆಂಬ ಸಿಟ್ಟಿಗೆ ಈ ಆಚರ‍್ರು ನಮ್ಮನ್ನೆಲ್ಲಾ ಅನಾಥರನ್ನಾಗಿಸಿ ಇಪ್ಪತ್ತು ವರ್ಷದ ಹಿಂದೆ ಊರು ಬಿಟ್ಟು ಬಂದಿದ್ದಾರೆ ಎಂದು ಆರೋಪಿಸುತ್ತಾಳೆ. ಅವಳ ಮಾತುಗಳನ್ನೆಲ್ಲಾ ಆಲಿಸಿದ ಆಚಾರಿಯು ಬಿಚ್ಚಿಡುವ ಕತೆಯಲ್ಲಿ ತಿಳಿಯುವ ಸತ್ಯಗಳು ಬೇರೆಯದೇ ಆಗಿರುತ್ತವೆ. ನಯನಾ ಮತ್ತು ಚಿನ್ನಯ್ಯನಿಗೆ ಬೆರಗು ಹುಟ್ಟಿಸುತ್ತವೆ.
ನಯನಾಳು ಮಾತಿಲ್ಲದ ಆಚಾರಿಯು ಮರಳಿ ಮಾತಾಡುವ ಹಾಗೆ ಮಾಡುವಂತೆಯೇ ಆಚಾರಿಯು ಅವಳಿಗೂ ಉಪ್ಪಿನ ಕಾಗದದಿಂದ ಓರೆಕೋರೆ ತಿದ್ದುವುದನ್ನು ಕಲಿಸುತ್ತಾನೆ. ಆ ಮೂಲಕ ಉಪ್ಪಿನ ಕಾಗದ ಎಂಬುದು ಇಂದಿನ ಸಮಾಜದ ಬಹುಮುಖ್ಯ ಅಗತ್ಯ ಹಾಗೂ ಪ್ರತಿಮೆ ಎಂಬುದು ಸ್ಪಷ್ಟವಾಗುತ್ತದೆ.

* * *

Continue reading ‘ಬಿ.ಸುರೇಶ ಅವರ “ಉಪ್ಪಿನ ಕಾಗದ”’


ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 107,206 ಜನರು