Archive Page 2

ಏಳುಬೀಳುಗಳ ನಡುವೆ ಯಶಸ್ಸಿನತ್ತ ಚಲಿಸಿದವರ ಕತೆ

(ವಿನಾಯಕರಾಮ್ ಕಲಾಗಾರ್ ಅವರ “ತೂಗುದೀಪ ದರ್ಶನ” ಪುಸ್ತಕಕ್ಕೆ ಒಂದು ಮುನ್ನುಡಿ)

ಇದೊಂದು ಅಪರೂಪದ ಪುಸ್ತಕ. ಕೊಡಗಿನ ಪುಟ್ಟ ಊರಿನಲ್ಲಿ ಬೆಳೆದ ಹುಡುಗಿಯೊಬ್ಬಳು ಹಲವು ಬಗೆಯ ಸವಾಲುಗಳನ್ನು ಎದುರಿಸಿ ಕಡೆಗೆ ಗೆಲುವಿನರಮನೆಯಲ್ಲಿ ನಗುತ್ತಾ ನಿಂತ ಕತೆ ಇಲ್ಲಿದೆ. ಹೀಗೆ ಎರಡು ಸಾಲಿನಲ್ಲಿ ಹೇಳಿದರೆ ಪುಸ್ತಕದ ಪರಿಚಯ ಪೂರ್ಣವಾಗುವುದಿಲ್ಲ. ಇದು ಮೀನ, ಮೀನಮ್ಮ, ಮೀನಾಕ್ಷಿ, ಮೀನಾಕ್ಷಿ ತೂಗುದೀಪ ಶ್ರೀನಿವಾಸ್ ಅವರ ಜೀವನ ಗಾಥೆ. ನಮ್ಮೆಲ್ಲರ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಾಯಿ ಮೀನ ಅವರ ಜೀವನಯಾನದ ವಿವರಗಳು ಈ ಪುಸ್ತಕದ ಹೂರಣವಾಗಿದೆ. Continue reading ‘ಏಳುಬೀಳುಗಳ ನಡುವೆ ಯಶಸ್ಸಿನತ್ತ ಚಲಿಸಿದವರ ಕತೆ’

ಎರಡಲುಗಿನ ಖಡ್ಗದ ಎದುರು…!

(ನ್ಯಾಯಪಥ (ನಾನುಗೌರಿ) ಪತ್ರಿಕೆಗಾಗಿ ಬರೆದ ಲೇಖನ)

ಕಳೆದ ಕೆಲವು ವಾರಗಳಿಂದ ಡಬ್ಬಿಂಗ್ ಕುರಿತ ಚರ್ಚೆ ಮರಳಿ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣವಾದುದು ಕೋವಿಡ್ 19 ಕಾರಣವಾಗಿ ಹುಟ್ಟಿದ ಹೊಸ ಪರಿಸ್ಥಿತಿ. ಸರಿಸುಮಾರು 75 ಧಾರಾವಾಹಿಗಳು ಚಿತ್ರೀಕರಣವಾಗಿ ಪ್ರಸಾರವಾಗುತ್ತಿದ್ದ, ಆ ಮೂಲಕ ಸರಿಸುಮಾರು ಆರು ಸಾವಿರ ಜನರಿಗೆ ಉದ್ಯೋಗ ಒದಗಿಸಿದ್ದ ಕನ್ನಡ ಟೆಲಿವಿಷನ್ ಉದ್ಯಮವು ಲಾಕ್‍ಡೌನ್‍ನಿಂದಾಗಿ ಚಿತ್ರೀಕರಣಗಳನ್ನು ಮಾಡಲಾಗದ ಪರಿಸ್ಥಿತಿ ಉಂಟಾಯಿತು. ಆ ಲಾಕ್‍ಡೌನ್ ತೆರೆದಾಗ 26 ಧಾರಾವಾಹಿಗಳನ್ನು ನಿಲ್ಲಿಸಿ ಆ ಜಾಗದಲ್ಲಿ ಕನ್ನಡಕ್ಕೆ ಡಬ್ ಆದ ಇತರ ಭಾಷೆಯ ಧಾರಾವಾಹಿಗಳನ್ನು ಪ್ರಸಾರ ಮಾಡಲು ಹಲವು ವಾಹಿನಿಗಳು ಆರಂಭಿಸಿದವು. ಈ ವರೆಗೆ ಸಿನಿಮಾಗೆ ಇದ್ದ ಡಬ್ಬಿಂಗ್ ಎಂಬುದು ಧಾರಾವಾಹಿಗೂ ಬಂದುದರ ಹಿನ್ನೆಲೆಯಲ್ಲಿ ಡಬ್ಬಿಂಗ್ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. Continue reading ‘ಎರಡಲುಗಿನ ಖಡ್ಗದ ಎದುರು…!’

ಮಕ್ಕಳೆದುರಿಗೆ ಅರಳಿದ ಅಮ್ಮನ ಬದುಕು ಪುಸ್ತಕವಾಗಿದ್ದು, ಪ್ರಶಸ್ತಿ ದೊರೆತದ್ದು, ಇತ್ಯಾದಿ…

(ವಿಜಯವಾಣಿ ಪತ್ರಿಕೆಗಾಗಿ ಅಮ್ಮನ (ಡಾ.ವಿಜಯಾ) ಆತ್ಮಚರಿತ್ರೆ ಕುರಿತಂತೆ ಬರೆದ ಟಿಪ್ಪಣಿ)

ಹೌದು. ನಾನು ಎರಡು ಅಥವಾ ಮೂರನೇ ತರಗತಿಗೆ ಹೋಗುವಾಗ ಅಮ್ಮ ಸಹ ಪದವಿಪೂರ್ವ ಶಿಕ್ಷಣಕ್ಕಾಗಿ ಸಂಜೆ ಕಾಲೇಜಿಗೆ ಸೇರಿದರು. ನಾನು ಹಗಲಿನಲ್ಲಿ ನನ್ನ ಶಾಲೆಯ ಪಾಠಗಳನ್ನು ಓದುವಾಗ ಅಮ್ಮ ಅಡಿಗೆ ಮಾಡುತ್ತಲೇ ಸೋಷಿಯಾಲಜಿ, ಪೊಲಿಟಿಕಲ್ ಸೈನ್ಸ್ ಓದುತ್ತಿದ್ದರು. ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತಾಕೆಗೆ ಪಿಯುಸಿಯಲ್ಲಿ ಇಂಗ್ಲೀಷ್ ಮೂಲಕ ಕಲಿಯು ಬೇಕಾದ ಕಷ್ಟವಿತ್ತು. ಆದರೂ ಆಕೆ ನಮ್ಮ ಜೊತೆಗೆ ಓದುತ್ತಾ ಓದುತ್ತಾ ಸ್ನಾತಕೋತ್ತರ ಕನ್ನಡ ಎಂಎ ವರೆಗೆ ಓದಿದ್ದು, ಡಾಕ್ಟರೇಟ್ ಪ್ರಬಂಧ ಬರೆದದ್ದು ಎಲ್ಲವೂ ನನ್ನಂತಹವರಿಗೆ ಸದಾ ಕಾಲ ಮಾದರಿಯಾಗಿ ಇರುವಂತಹ ಸಂಗತಿ. `ವಯಸ್ಸು ಎಷ್ಟಾದರೇನು? ಬದುಕು ಯಾವ ಕಷ್ಟ ಕೊಟ್ಟರೇನು? ನಮ್ಮ ಕನಸುಗಳ ಮೆಟ್ಟಿಲುಗಳನ್ನ ನಾವು ಏರಲೇಬೇಕು’ ಎಂಬ ಸತ್ಯವನ್ನು ಸ್ವತಃ ಬದುಕಿ ತೋರಿಸಿದಾಕೆ ನಮ್ಮಮ್ಮ. ಹಾಗಾಗಿಯೇ ನಾನು ನನಗಾಗಿ ಆಗಾಗ ಹೇಳಿಕೊಳ್ಳುತ್ತಾ ಇರುತ್ತೇನೆ, “ಇಂತಹ ಅಮ್ಮ ಸಿಗದೆ ಹೋಗಿದ್ದರೆ ನೀನು ಈಗೇನಾಗಿದ್ದೀಯೋ ಅದಾಗುತ್ತಾ ಇರಲಿಲ್ಲ” ಎಂದು. Continue reading ‘ಮಕ್ಕಳೆದುರಿಗೆ ಅರಳಿದ ಅಮ್ಮನ ಬದುಕು ಪುಸ್ತಕವಾಗಿದ್ದು, ಪ್ರಶಸ್ತಿ ದೊರೆತದ್ದು, ಇತ್ಯಾದಿ…’

ತಾಯಿಯ ಮೂಲಕ ಜಗತ್ತಿನ ತರತಮ ಕಾಣಿಸುವ ಕವಿ ಸತ್ಯಾನಂದ

(ಸತ್ಯಾನಂದ ಪಾತ್ರೋಟ ಅವರ ಅವ್ವಾ ಕವನ ಸಂಕಲನ ಕುರಿತ ಲೇಖನಗಳ ಸಂಗ್ರಹಕ್ಕೆ ಬರೆದ ಲೇಖನ)

ಅವ್ವಾ ಎನ್ನುವುದು ಅಗಾಧ ಪ್ರೀತಿಯ ಕಣಜ. ಜಗತ್ತನ್ನೇ ಹೆತ್ತ ಜೀವಕ್ಕೆ ಪ್ರೀತಿಯ ಹೊರತು ಮತ್ತೇನಿದೆ ಹಂಚುವುದಕ್ಕೆ. ಅಂತಹ ಅವ್ವನನ್ನು ಕುರಿತು ಕನ್ನಡದಲ್ಲಿ ಸಹಸ್ರಾರು ಕವನಗಳು, ಕತೆಗಳು ಬಂದಿವೆ. ಹಲವು ಜನಪ್ರಿಯ ಸಿನಿಮಾಗಳು ಈ ತಾಯಿ ಎಂಬ ಭಾವಕೋಶವನ್ನೇ ಹಿಡಿದು ಹಲವು ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲುವ ಕಥನಗಳನ್ನು ರೂಪಿಸಿವೆ. ಪಿ.ಲಂಕೇಶರ “ಅವ್ವಾ” ತರಹದ ಕವನಗಳು ಆಧುನಿಕ ಸಾಹಿತ್ಯ ವಲಯದಲ್ಲಿ ನಿತ್ಯ ಬದುಕುತ್ತಿದೆ. ಇಂತಹ ಅವ್ವನನ್ನು ಕುರಿತು ನಮ್ಮ ನಡುವಿನ ಅಪರೂಪದ ಕವಿಗಳಲ್ಲಿ ಒಬ್ಬರಾದ ಸತ್ಯಾನಂದ ಪಾತ್ರೋಟ ಅವರು ಹೊಸದೊಂದು ಕವನ ಬರೆದಿದ್ದಾರೆ. Continue reading ‘ತಾಯಿಯ ಮೂಲಕ ಜಗತ್ತಿನ ತರತಮ ಕಾಣಿಸುವ ಕವಿ ಸತ್ಯಾನಂದ’

“ನಮ್ಮ ಧ್ವನಿ” ಸಮಾವೇಶದಲ್ಲಿ ಆಡಿದ ಮಾತಿನ ಬರಹ ರೂಪ

(ನಮ್ಮ ಧ್ವನಿ ಸಂಸ್ಥೆಯ ಮಹೇಂದ್ರ ಕುಮಾರ್ ಅವರು ತಮ್ಮ ಸಂಘಟನೆಯ ಬೆಂಗಳೂರು ಸಮಾವೇಶದ ಸಮಾರೋಪ ಸಮಾರಂಭಕ್ಕೆ 2019ರ ಆಗಸ್ಟ್ ತಿಂಗಳಲ್ಲಿ ಆಹ್ವಾನಿಸಿದ್ದರು. ನಾನು ಅಲ್ಲಿ ಆಡಿದ ಮಾತಿನ ಬರಹ ರೂಪ ಇಲ್ಲಿದೆ. ಇದನ್ನು ಲೇಖನ ರೂಪವಾಗಿ ಮಾಡಿಕೊಟ್ಟ “ನಮ್ಮ ಧ್ವನಿ” ತಂಡದವರಿಗೆ ವಿಶೇಷ ಕೃತಜ್ಞತೆಗಳನ್ನುಈ ಮೂಲಕ ಸಲ್ಲಿಸುತ್ತೇನೆ.)

ಇದು ಮಾತಿಗೆ ಸಮಯವಲ್ಲ. ಅಂದರೆ ಇನ್ಯಾವುದಕ್ಕೆ ಸಮಯ…? ಪ್ರಾಯಶಃ ಸಂವಾದಕ್ಕೆ ಸಮಯ. ನಾವು ಮತ್ತೆ ಮತ್ತೆ ಜೊತೆಯಾಗಿ ಕೂತು ಮಾತನಾಡಬೇಕಿರುವುದು ಈ ಹೊತ್ತಿನ ಅತೀ ದೊಡ್ಡ ಅಗತ್ಯ. ಯಾಕೆ ನಾನು ಈ ಮಾತನ್ನು ಹೇಳಿಕೊಂಡು ಮುಂದುವರೆಯುತ್ತಿದ್ದೇನೆ ಎಂದರೆ, ಕೆ.ಸಿ.ರಘುರವರು ಸಾಕಷ್ಟು ಅಂಕಿ-ಸAಖ್ಯೆಗಳ ಸಹಿತವಾಗಿ, ಭಾರತದ ಇಂದಿನ ಆರ್ಥಿಕ ಪರಿಸ್ಥಿತಿಯನ್ನು, ವಿಶೇಷವಾಗಿ ಕೃಷಿಕರ ಆರ್ಥಿಕ ಪರಿಸ್ಥಿತಿಯನ್ನು ತಿಳಿಸಿದ್ದಾರೆ. ಈ ವಿಷಯವನ್ನು ನೀವು ಸಾಧ್ಯವಾದರೆ ದಿನಕ್ಕೆ ಕನಿಷ್ಟ ೧೫ ನಿಮಿಷ, ರಘು ಅವರು ಹೇಳಿದ ಹಾಗೆ ಧ್ಯಾನ ಮಾಡಿದರೆ ನಿಜಕ್ಕೂ ತುಂಬಾ ಒಳ್ಳೆಯದಾಗುತ್ತದೆ ಎಂದು ನಾನು ಭಾವಿಸುತ್ತೇನೆ. Continue reading ‘“ನಮ್ಮ ಧ್ವನಿ” ಸಮಾವೇಶದಲ್ಲಿ ಆಡಿದ ಮಾತಿನ ಬರಹ ರೂಪ’


ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 105,109 ಜನರು