Posts Tagged 'Media'

ಸಿನಿಮಾದ ಸಂಕೇತ ಭಾಷೆ – ಸಿಮಿಯಾಟಿಕ್ಸ್

(“ಹವ್ ಟು ರೀಡ್ ಎ ಫಿಲ್ಮ್” ಎಂಬ ಜೇಮ್ಸ್ ಮೋನಾಕೊನ ಪುಸ್ತಕದ ಮೂರನೆಯ ಅಧ್ಯಾಯದ ಮೊದಲ ಭಾಗದ ಅನುವಾದ.)

ಸಿನಿಮಾಗೆ ಇತರ ಭಾಷೆಗಳಂತಹ ಭಾಷೆಯಿಲ್ಲ. ಆದರೆ ಯಾವುದೇ ಸಿನಿಮಾವು ಯಾವತ್ತಿಗೂ ವ್ಯಾಕರಣವಿಲ್ಲದೆ ಇರುವುದಿಲ್ಲ. ಸಿನಿಮಾದ ಭಾಷೆಯನ್ನು ಕಲಿಯಲು ಯಾವುದೇ ಸಿದ್ಧತೆಯೂ ಬೇಕಿಲ್ಲ. ಆ ಕಾರಣಕ್ಕಾಗಿಯೇ ಎಳೆಯ ಮಕ್ಕಳು ಸಹ ಮಾತು (ಆಡುವ ಭಾಷೆಯನ್ನು) ಕಲಿಯುವ ಮೊದಲೇ ಟೆಲಿವಿಷನ್‍ನಲ್ಲಿ ಬರುವ ದೃಶ್ಯಗಳನ್ನು ಗ್ರಹಿಸಬಲ್ಲರು. ಬೆಕ್ಕುಗಳು ಸಹ ಟೆಲಿವಿಷನ್ ನೋಡುತ್ತವೆ. ಒಂದು ಸಿನಿಮಾದ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಮತ್ತು ಸಿನಿಮಾ ಸೌಂದರ್ಯ ಗ್ರಹಣ ಆಗುವುದಕ್ಕೆ ಯಾವುದೇ ಭೌದ್ಧಿಕ ಅಥವಾ ಅಕೆಡೆಮಿಕ್ ಶಿಸ್ತಿನ ಕಲಿಕೆಯ ಅಗತ್ಯವೂ ಇಲ್ಲ.

ಆದರೆ ಸಿನಿಮಾ ಬಹುತೇಕ ಇತರ ಭಾಷೆಗಳ ಹಾಗೆಯೇ ಭಾಷೆ ಎಂದು ಗುರುತಿಸಬಹುದಾದ್ದು. ಒಂದು ಸಿನಿಮಾದಲ್ಲಿ ಆ ಭಾಷೆಯ ಹೆಚ್ಚು ಅನುಭವವುಳ್ಳವರು (ಅಂತಹವರನ್ನು ಸಿನಿಮಾ ಸಾಕ್ಷರರು, ದೃಶ್ಯ ಸಾಕ್ಷರರು ಎನ್ನಬಹುದು) ನೋಡುವ ಮತ್ತು ಕೇಳುವ ವಿವರಗಳು ಸಾಮಾನ್ಯ ಸಿನಿಮಾ ನೋಡುಗರಿಗಿಂತ ಹೆಚ್ಚಾಗಿರುತ್ತದೆ ಎಂಬುದಂತೂ ಸತ್ಯ. ಹಾಗಾಗಿ ಭಾಷೆಯಿಲ್ಲದ ಸಿನಿಮಾ ಭಾಷೆಯನ್ನು ಒಂದಷ್ಟು ತಿಳಿದುಕೊಂಡರೆ ಒಂದು ಸಿನಿಮಾ ನೀಡುವ ಅನುಭವ ಹಾಗೂ ನೊಡುವ ಅನುಭವ ಖಂಡಿತ ಬದಲಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾಷಾ ಶಾಸ್ತ್ರ ಹಾಗೂ ಭಾಷಾ ವಿಜ್ಞಾನದ ವಿವರಗಳ ಜೊತೆಗೆ ಸಿನಿಮಾ ಭಾಷೆಯನ್ನು ಗಮನಿಸುವ ಪ್ರಯತ್ನ ಇಲ್ಲಿದೆ. Continue reading ‘ಸಿನಿಮಾದ ಸಂಕೇತ ಭಾಷೆ – ಸಿಮಿಯಾಟಿಕ್ಸ್’

Advertisements

“ಪ್ರತಿಭಟನೆಯಾಗಿ ಕಾವ್ಯ” (ಚಕ್ರವರ್ತಿ ಚಂದ್ರಚೂಡ ಅವರ “ಮೈಲುತುತ್ತಾ” ಕುರಿತು)

ಇದು ಪ್ರತಿಭಟನೆಯ ಕಾಲ. ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಕೂಗಿ ಕೂಗಿ ಹೇಳುವ ಕಾಲ. ಕಳೆದೆರಡು ವರ್ಷದಲ್ಲಿನ ನಮ್ಮ ದೇಶದ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯ ಬಗ್ಗೆ ಸಂತೋಷ ಪಡಬಹುದಾದ ಬಹುಮುಖ್ಯ ವಿಷಯವೆಂದರೆ ಈ ಕಾಲಘಟ್ಟವು ಅತಿ ಹೆಚ್ಚು ಚಳುವಳಿಗಳಿಗೆ ಮತ್ತು ಸೃಜನಶೀಲ ಚಟುವಟಿಕೆಗಳಿಗೆ ಗ್ರಾಸ ಒದಗಿಸಿದೆ. ಹಾಗಾಗಿಯೇ ಇವತ್ತಿನ ಕಾಲವನ್ನು ಅತಿಹೆಚ್ಚು ಹೋರಾಟದ ಹಾಡುಗಳು ಹುಟ್ಟಿದ ಕಾಲ ಎಂದು ಸಹ ನಾಳಿನವರು ಗುರುತಿಸಬಹುದೇನೋ. ಒಂದು ವ್ಯವಸ್ಥೆ ತನ್ನ ಜನರ ನಡುವೆಯೇ ಒಡಕು ಮೂಡಿಸುವ ಕೆಲಸಕ್ಕಿಳಿದಾಗ, ತಾನು ಶ್ರೇಷ್ಟ ಇತರರು ಕನಿಷ್ಟ ಎಂಬ ಭಾವದ ಪ್ರಚಾರಕ್ಕೆ ಸ್ವತಃ ನಿಂತಾಗ, ಇತರರು ತಿನ್ನುವ ಆಹಾರವನ್ನು ನಿಯಂತ್ರಿಸಲು ಹೊರಟಾಗ ಸಮಾಜ ಸುಮ್ಮನಿರುವುದಿಲ್ಲ. ಅದು ತನ್ನ ಸ್ವಾತಂತ್ರ್ಯಕ್ಕೆ ಇರಬಹುದಾದ ಎಲ್ಲಾ ಮಗ್ಗುಲುಗಳನ್ನು ಬಳಸಿಕೊಂಡು ಕೂಗಿ ಕೂಗಿ ತನ್ನ ನೋವನ್ನು ಹತಾಶೆಯನ್ನು ಮತ್ತು ಬಿಡಗಡೆಯ ಆಶಯವನ್ನು ಹೇಳುತ್ತಾ ಇರುತ್ತದೆ. ಆ ಹಿನ್ನೆಲೆಯಲ್ಲಿ ಇಂದು ಹೊರ ಬರುತ್ತಾ ಇರುವ ಸಾಹಿತ್ಯ ಕೃತಿಗಳು, ಕವನಗಳು, ನಾಟಕಗಳು, ಸಿನಿಮಾಗಳು – ಎಲ್ಲವೂ ಪ್ರತಿಭಟನೆಯ ಅಸ್ತ್ರಗಳಾಗಿಯೇ ಬರುತ್ತಿವೆ. ಸುಮಾರು ಎಪ್ಪತ್ತರ ದಶಕದಲ್ಲಿದ್ದ ಕಾವು ಮರಳಿ ನಮ್ಮ ಎಲ್ಲಾ ಮಾಧ್ಯಮಗಳಿಗೆ ದೊರೆತಿದೆ. ನಾವು ಇದಕ್ಕಾಗಿ ನಮ್ಮನ್ನಾಳಲು ಮೆಜಾರಿಟಿ ಶಕ್ತಿಯೊಂದಿಗೆ ಬಂದು ಕುಳಿತಿರುವ ಹೊಸ ಸರ್ಕಾರಕ್ಕೆ ಥ್ಯಾಂಕ್ಸ್ ಹೇಳಬೇಕು.
ಇಂತಹ ಕಾಲಘಟ್ಟದಲ್ಲಿ ಗೆಳೆಯ ಚಂದ್ರಚೂಡ ಅವರು ಮತ್ತೊಂದು ಕವನ ಸಂಕಲನ ಹೊರತರುತ್ತಿದ್ದಾರೆ. “ಮೈಲುತುತ್ತಾ” – ಇದು ಈ ಕವನ ಸಂಕಲನದ ಹೆಸರು. Continue reading ‘“ಪ್ರತಿಭಟನೆಯಾಗಿ ಕಾವ್ಯ” (ಚಕ್ರವರ್ತಿ ಚಂದ್ರಚೂಡ ಅವರ “ಮೈಲುತುತ್ತಾ” ಕುರಿತು)’

“ಒಂದು ಸಾಹಸಪೂರ್ಣ ಪ್ರಯತ್ನ”

ರಾಣಾ ಆಯೂಬ್ ಅವರು ಬರೆದು, ಸ್ವತಃ ಪ್ರಕಟಿಸಿರುವ “ಗುಜರಾತ್ ಫೈಲ್ಸ್- ಅನಾಟಮಿ ಆಫ್ ಎ ಕವರ್ ಅಪ್” ಪುಸ್ತಕದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಈಚೆಗೆ ತೀವ್ರ ಚರ್ಚೆ ನಡೆದಿತ್ತು. ಪರ-ವಿರೋಧಗಳ ತೀವ್ರ ಹಣಾಹಣಿಯು ಮೂಡಿಸಿದ ಕುತೂಹಲದಿಂದ ಈ ಪುಸ್ತಕವನ್ನು ಓದಿದೆ. Continue reading ‘“ಒಂದು ಸಾಹಸಪೂರ್ಣ ಪ್ರಯತ್ನ”’

“ದೃಶ್ಯೋದ್ಯಮದಲ್ಲಿನ ಮನಾಪಲಿ ವ್ಯವಸ್ಥೆಗಳನ್ನು ಎದುರಿಸುತ್ತಾ ಈಸುವ ಬಗೆ ಹೇಗೆ?”

(ಸಂಕ್ರಮಣ ಸಾಹಿತ್ಯ ಪತ್ರಿಕೆಯ ಬಂಗಾರದ ಹಬ್ಬದ ಪ್ರಯುಕ್ತ ನಡೆದ ವಿಚಾರ ಸಂಕಿರಣದಲ್ಲಿ “ಕನ್ನಡ ಚಲನಚಿತ್ರ ಮತ್ತು ಡಬ್ಬಿಂಗ್ ಸಂಸ್ಕೃತಿ” ಕುರಿತ ಗೋಷ್ಟಿಯಲ್ಲಿ ಆಡಿದ ಮಾತುಗಳ ಲೇಖನ ರೂಪ)

(ಟಿಪ್ಪಣಿ: ಮೂಲ ಭಾಷಣದ ರೆಕಾರ್ಡೆಡ್ ಪ್ರತಿ ಇರಲಿಲ್ಲ. ಹೀಗಾಗಿ ನೆನಪಿಗೆ ಬಂದಂತೆ ಲೇಖನ ಬರೆಯಲಾಗಿದೆ. ಇಲ್ಲಿ ಬರೆದ ಕೆಲವು ಮಾತುಗಳು ಗೋಷ್ಟಿಯಲ್ಲಿ ಆಡಿಲ್ಲದ ಮಾತು ಸಹ ಆಗಿರಬಹುದು.)

ನಾನಿಲ್ಲಿ ಆಕಸ್ಮಿಕವಾಗಿ ಬಂದವನು. ಈ ಹೊತ್ತಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಇರಬೇಕಿದ್ದವನು ಕಾರ್ಮಿಕರ ಹೋರಾಟದ ಸಲುವಾಗಿ ಮರಳಿ ರಾಜಧಾನಿಗೆ ಹಿಂದಿರುಗಿದೆ. ನಿನ್ನೆ ಹದಿನೈದು ಸಾವಿರ ಕಾರ್ಮಿಕರು ರಾಜಧಾನಿಯಲ್ಲಿ ಸೇರಿದ್ದರು, ಕನಿಷ್ಟ ವೇತನ ಮತ್ತು ಕಾರ್ಮಿಕರ ಹಕ್ಕುಗಳ ಬೇಡಿಕೆಯೊಂದಿಗೆ. ಈ ವಿಷಯ ನಮ್ಮ ವಾಹಿನಿಗಳಲ್ಲಿ ಸುದ್ದಿಯಾಗಲಿಲ್ಲ. ಆದರೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆದ ಸುದ್ದಿ ಮಾತ್ರ ದಿನವೆಲ್ಲಾ ಬರುತ್ತಿತ್ತು. ಇಂತಹ ಸಂದರ್ಭದಲ್ಲಿ ನಾವು “ಡಬ್ಬಿಂಗ್” ಎಂಬ ವಿಷಯದ ಬಗ್ಗೆ ಮಾತಾಡುತ್ತಾ ಇರುವುದು ಸಹ ಪ್ರಾಯಶಃ ಕಾರ್ಮಿಕರ ಮತ್ತು ಕ್ರಿಯಾಶೀಲ ಕೆಲಸಗಾರರ ನೆಲೆಯಿಂದ ಅತ್ಯಂತ ಸಮಯೋಚಿತ ಎಂದು ಭಾವಿಸುತ್ತೇನೆ. Continue reading ‘“ದೃಶ್ಯೋದ್ಯಮದಲ್ಲಿನ ಮನಾಪಲಿ ವ್ಯವಸ್ಥೆಗಳನ್ನು ಎದುರಿಸುತ್ತಾ ಈಸುವ ಬಗೆ ಹೇಗೆ?”’

“ರಂಗಭೂಮಿಯೊಂದೇ ನಿಜವಾದ ಜಾತ್ಯಾತೀತ ಹಾಗೂ ಸಮತಾವಾದದ ಪ್ರತೀಕ”

(ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ “ಕಣಜ” ವೆಬ್‍ ಪೋರ್ಟಲ್‍ಗೆ ಬರೆದ ಮಾತು)

ಜಾಗತಿಕವಾಗಿ ವಿಶ್ವರಂಗಭೂಮಿ ದಿನ ಎಂದು ಗುರುತಿಸುವ ಅಭ್ಯಾಸವೊಂದು ಆರಂಭವಾದದ್ದು 1962ರಲ್ಲಿ. ಅಲ್ಲಿಂದ ಈ ದಿನದ ವರೆಗೆ ಪ್ರತೀ ವರ್ಷ ಹಿರಿಯ ರಂಗಕರ್ಮಿಗಳು “ವಿಶ್ವರಂಗದಿನದ ಸಂದೇಶ” ನೀಡುತ್ತಾ ಬಂದಿದ್ದಾರೆ. 1962ರಲ್ಲಿ ಫ್ರೆಂಚ್ ರಂಗಕರ್ಮಿ ಜೀನ್ ಕಾಕ್‍ಟಿಯೂ ನೀಡಿದ ಸಂದೇಶದಿಂದ ಈ ವರ್ಷ ರಷ್ಯದ ವ್ಯಾಸಿಲೇವ್ ಮತ್ತು ಅಮೇರಿಕಾದ ಚೀನಿ ಮೂಲದ ಚಾಂಗ್ ಇಬ್ಬರು ಸಂದೇಶ ನೀಡುವವರೆಗಿನ ಎಲ್ಲಾ ಸಂದೇಶಗಳನ್ನೂ ಗಮನಿಸಿದರೆ ನಮಗೆ ಕಾಣುವುದು ಒಂದೇ ವಿಷಯ. ಸಮಕಾಲೀನ ಜಗತ್ತನ್ನು ಕಾಡುತ್ತಾ ಇರುವ ಜಾತೀಯವಾದ, ಮತೀಯ ಗಲಭೆ, ವರ್ಗ-ವರ್ಣ ಭೇದ, ಬಡತನದ ಸಮಸ್ಯೆಗಳು ಹಾಗೂ ಬಂಡವಾಳಶಾಹಿಗಳ ಮನಾಪಲಿ ಬಹುಮತೀಯ ವಾದಗಳನ್ನು ಗೆಲ್ಲಲು ಇರುವ ಏಕೈಕ ಅಸ್ತ್ರ ಹಾಗೂ ಔಷಧವು – ಜಾತ್ಯಾತೀತ ಹಾಗೂ ಸಮಸಮಾಜವಾದ ಪ್ರತೀಕ ಎನ್ನಬಹುದಾದ ರಂಗಭೂಮಿ ಮಾತ್ರ. ಈ ಕಾರಣಕ್ಕಾಗಿಯೇ ಇಂದು ರಂಗಭೂಮಿಯು ನಮ್ಮ ಸಮಾಜ ನಿರ್ಮಾಣಕ್ಕೆ ನೀಡಿರುವ ಕೊಡುಗೆಗಳನ್ನು ಮತ್ತೆ ಮತ್ತೆ ಗಮನಿಸಬೇಕಾಗಿದೆ ಹಾಗೂ ದೊಡ್ಡ ದನಿಯಲ್ಲಿ ಜಗತ್ತಿಗೆ ಹೇಳಬೇಕಾಗಿದೆ. Continue reading ‘“ರಂಗಭೂಮಿಯೊಂದೇ ನಿಜವಾದ ಜಾತ್ಯಾತೀತ ಹಾಗೂ ಸಮತಾವಾದದ ಪ್ರತೀಕ”’

“ಓ! ನಾ ಕಂಡೆನಲ್ಲಾ…? ಹಾಗಾಗಿ….”

(ಕರ್ನಾಟಕ ಸಾಹಿತ್ಯ ಅಕಾಡೆಮಿ ನಡೆಸಿದ ನಾಟಕ ರಚನಾ ಶಿಬಿರದಲ್ಲಿ “ಆಧುನಿಕ ನಾಟಕ ಕಟ್ಟುವ ಕ್ರಮ” ಕುರಿತು ನೀಡಿದ ಉಪನ್ಯಾಸದ ಲೇಖನ ರೂಪ)

ನಾನು ನಿಮ್ಮೊಡನೆ ಈ ಮಾತುಗಳನ್ನು, ಆ ಮೂಲಕ ಒಂದು ಉಪನ್ಯಾಸ ಎಂಬರ್ಥದ ವ್ಯಾಖ್ಯಾನವನ್ನು ಕಟ್ಟುವ ಮೊದಲಿಗೆ ನನ್ನ ಗುರುಗಳು ನನಗೆ ಹೇಳಿದ ಮಾತನ್ನು ನಿಮಗೆ ಹೇಳಿಬಿಡುತ್ತೇನೆ, “ವಿದ್ಯಾರ್ಥಿ ಎಂದರೆ ಕಪ್ಪುಹಲಗೆಯ ಹಾಗೆ. ಪ್ರತಿಯೊಬ್ಬನು ಬರೆಯುವುದನ್ನು ಆ ಕಪ್ಪು ಹಲಗೆಯ ಮೇಲೆ ಬರೆಯಬಹುದು. ಅಂತಿಮವಾಗಿ ಎಲ್ಲರೂ ಬರೆದುದನ್ನು ಅಳಿಸಿ, ವಿದ್ಯಾರ್ಥಿಯು ತನ್ನದೇ ಆದ ಹೊಸ ಬರಹವನ್ನು ಬರೆದುಕೊಳ್ಳಬೇಕು.” ಈ ಮಾತಿನಂತೆ ನಾನು ನಿಮ್ಮೊಡನೆ ಆಡುವ ಮಾತನ್ನು ನನ್ನ ಗ್ರಹಿಕೆಗೆ ದಕ್ಕಿದ ವಿವರ ಎಂದು ಮಾತ್ರ ಗ್ರಹಿಸಿ, ನನ್ನ ಗ್ರಹಿಕೆಗಳು ತಪ್ಪೂ ಆಗಿರಬಹುದು. ನನ್ನ ತಿಳುವಳಿಕೆಗೆ ಹಿಡಿದ ದಾರಿಯೂ ಸರಿಯಲ್ಲದಿರಬಹುದು. ಹೀಗಾಗಿ ನೀವು ನನ್ನ ಮಾತಿನ, ವ್ಯಾಖ್ಯಾನದ ಆಚೆಗಿನ ಜಗತ್ತನ್ನು ಹುಡುಕಬೇಕು. ಆಗ ಮಾತ್ರ ನಿಮ್ಮ ಕಲಿಕಯು ನಿಮ್ಮದೇ ಅನ್ವೇಷಣೆಯಾಗುತ್ತದೆ. ಇಲ್ಲವಾದರೆ ನಿಮ್ಮದೆಂಬ ಸೃಜನಶೀಲ ಪ್ರಕ್ರಿಯೆಯನ್ನು ಮಾಡುವ ಬದಲಿಗೆ ಮತ್ಯಾರೋ ಕೊಟ್ಟ ಸಾಧನಗಳನ್ನು ಬಳಸಿ ನೀವು ಕಟ್ಟಲು ಹೊರಟದ್ದು ಪೊಳ್ಳಾಗಿಬಿಡುತ್ತದೆ. ಈ ಎಚ್ಚರಿಕೆಯ ಜೊತೆಗೆ ನಾನಿನ್ನು ಮುಂದೆ ಆಡುವ ಮಾತುಗಳನ್ನು ಸ್ವೀಕರಿಸಿ. ನನ್ನ ಮಾತುಗಳ ನಂತರ ಕೇಳುವುದಕ್ಕೆ ನಿಮ್ಮ ಪ್ರಶ್ನೆಗಳ ಬಾಣಗಳನ್ನು ಹರಿತಗೊಳಿಸಿ. ಯಾವ ವ್ಯಕ್ತಿಯೂ ಪ್ರಶ್ನಾತೀತನಲ್ಲ. ನಿಮ್ಮಲ್ಲಿ ಯಾವ ಪ್ರಶ್ನೆಗಳನ್ನು ಹುಟ್ಟಿಸದ ಮಾತುಗಳನ್ನಾಡುವವನು ಖಂಡಿತ ನಿಮಗೇನೂ ಕಲಿಸುವವನೂ ಅಲ್ಲ ಎಂಬುದು ನನ್ನ ನಿಲುವು.

ನಿಮಗೆ ಮತ್ತೂ ಒಂದು ವಿಷಯ ತಿಳಿದಿರಲಿ. ನಾನು ಉಪನ್ಯಾಸಕ ಅಲ್ಲ. ಕಲಿಸುವುದನ್ನು ಕಲಿತ ಜಾಣನೂ ಅಲ್ಲ. ಹೀಗಾಗಿ ನಾನಾಡುವ ಮಾತು ಪಳಗಿದ ಗುರುಗಳಂತೆ ನಿರ್ದಿಷ್ಟ ಗುರಿಯ ಕಡೆಗೆ ಎಸೆವ ಬಾಣವಲ್ಲ. ನನ್ನ ಮಾತು ಕೂಡ ನನ್ನಂತೆಯೇ. ಲಹರಿ ಬಂದ ಕಡೆ ಚಲಿಸುವಂತಹದು. ನಿಮಗೆ ನನ್ನ ಮಾತು ಏಕತಾನತೆ ಅಥವಾ ಬೇಡದ್ದು ಎನಿಸಿದರೆ ಚಪ್ಪಾಳೆ ಹೊಡೆದು ನಿಲ್ಲಿಸಬಹುದು. ನಾವು ಇನ್ಯಾವುದಕ್ಕಲಲ್ಲದಿದ್ದರೂ ಜ್ಞಾನ ಎಂಬ ಆನಂದಮಯ ಜಗತ್ತಿಗೆ ಮಾತ್ರ ವಿನಯದಿಂದ ನಮ್ಮನ್ನು ಒಪ್ಪಿಸಿಕೊಳ್ಳಬೇಕು. ಆಗ ಮಾತ್ರ, ದಿವ್ಯಾನಂದದ ಸುಖ ದೊರಕಬಹುದು.

ಇಲ್ಲಿ ನಾನಾಡಲಿರುವ ಮಾತುಗಳು ಮೂಲತಃ ರಂಗಭೂಮಿಗಾಗಿ ಬರೆಯುವವರನ್ನು ಉದ್ದೇಶಿಸಿದೆಯಾದರೂ ಇಲ್ಲಿನ ಅನೇಕ ಮಾತುಗಳು ಕಿರುತೆರೆ ಹಾಗೂ ಹಿರಿತೆರೆಗಾಗಿ ಬರೆಯುವವರಿಗೂ ಉಪಯುಕ್ತವಾಗಬಹುದು.

ಈ ಪ್ರಯಾಣದಲ್ಲಿ ನಿಮಗೂ – ನನಗೂ ಒಳಿತಾಗಲಿ ಎಂದು ಹಾರೈಸಿಕೊಳ್ಳುತ್ತಾ ಆರಂಭಿಸುತ್ತೇನೆ. Continue reading ‘“ಓ! ನಾ ಕಂಡೆನಲ್ಲಾ…? ಹಾಗಾಗಿ….”’

Intense interview with B.Suresha Film maker/ Television writer & Director, Theatre Activist

Interview by Srividya of Jain University, Student of Media studies department (April 2014)
ಮಾಧ್ಯಮದ ವಿದ್ಯಾರ್ಥಿಯೊಬ್ಬರು ಸಮಕಾಲೀನ ಚಲನಚಿತ್ರ ಚಳುವಳಿಯನ್ನು ಕುರಿತಂತೆ ಮಾಡಿದ ಸಂದರ್ಶನವಿದು. ನಾನಾಡಿದ ಮಾತನ್ನು ಆ ವಿದ್ಯಾರ್ಥಿ ಬರೆದಂತೆಯೇ ಇಲ್ಲಿ ದಾಖಲಿಸಿದೆ. ಅವರ ಪ್ರಶ್ನೆಗಳು ಇಂಗ್ಲೀಷಿನಲ್ಲಿದೆ. ನನ್ನ ಉತ್ತರಗಳು ಕನ್ನಡದಲ್ಲಿವೆ. Continue reading ‘Intense interview with B.Suresha Film maker/ Television writer & Director, Theatre Activist’


Advertisements

ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 55,861 ಜನರು